ತ್ರಿಶೂರ್: ಬೀಂಪುಳಿಯ ಸಿಪ್ಪೆಯೊಂದಿಗೆ ಭತ್ತದ ಹೊಟ್ಟು ಅಥವಾ ಉಮಿಕ್ಕರಿ ಸೇರಿಸಿ ಕಡಿಮೆ ವೆಚ್ಚದ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಟೈರ್ ತಯಾರಿಸಬಹುದು ಎಂದು ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಅನ್ವಯಿಕ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ. ಎಂ. ಸಬೂರಾ ಬೇಗಂ. ಡಾ. ಸಿ. ಡಿ. ಮಿಥುನ್ ಡೊಮಿನಿಕ್, ಯೋಜನೆಯ ಸಹಾಯಕಿ ಐಶ್ವರ್ಯಾ ಬಾಲನ್ ಅವರು ಟೈರ್ ಇತ್ಯಾದಿಗಳನ್ನು ತಯಾರಿಸಲು ಬಳಸುವ ಭತ್ತದ ಸಿಪ್ಪೆಯಿಂದ ಸಿಲಿಕಾವನ್ನು ಸುಲಭವಾಗಿ ಬೇರ್ಪಡಿಸುವ ಅಧ್ಯಯನವನ್ನು ಮಾಡಿದ್ದಾರೆ. ಬೀಂಪುಳಿ( ಂveಡಿಡಿhoಚಿ biಟimbi) ಹಾಗೂ ಅತಿ ಹೆಚ್ಚು ತಾಪಮಾನದಲ್ಲಿ ಭತ್ತದ ಹೊಟ್ಟುಗಳನ್ನು ಸುಡುವ ಮೂಲಕ ಉತ್ಪತ್ತಿಯಾಗುವ ಸಿಲಿಕಾದಿಂದ ಸೋಡಿಯಂ ಮತ್ತು ಪೆÇಟ್ಯಾಸಿಯಮ್ ಅನ್ನು ಪ್ರತ್ಯೇಕಿಸುತ್ತದೆ ಎಂದು ಕಂಡುಹಿಡಿಯಲಾಗಿದೆ. ಈ ರೀತಿಯಾಗಿ, ಸಿಲಿಕಾದ ಅತ್ಯಂತ ದುಬಾರಿ ತಯಾರಿಕೆಯನ್ನು ಸರಳಗೊಳಿಸಬಹುದು.
ಪರಿಸರ ಮತ್ತು ಹವಾಮಾನ ಇಲಾಖೆಯಿಂದ ಧನಸಹಾಯ ಪಡೆದ ಅವರ ಸಂಶೋಧನೆಯ ಫಲಿತಾಂಶಗಳನ್ನು ಜರ್ನಲ್ ಆಫ್ ಕ್ಲೀನರ್ ಪ್ರೊಡಕ್ಷನ್‍ನಲ್ಲಿ ಪ್ರಕಟಿಸಲಾಗಿದೆ. ಕುಸಾಟ್ ನಲ್ಲಿ ಸಂಶೋಧನೆ ನಡೆಸಿದ ಡಾ. ಸಿ. ಡಿ. ಮಿಥುನ್ ಡೊಮಿನಿಕ್ ಈಗ ತೇವರ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಾಯಕ. ಪ್ರಾಧ್ಯಾಪಕರಾಗಿದ್ದಾರೆ.