ನವದೆಹಲಿ: ನೀಟ್‌ನಲ್ಲಿ ಸಮಾನ ಅಂಕ ಪಡೆದಿರುವ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ ರ‍್ಯಾಂಕಿಂಗ್ ಪಟ್ಟಿ ಪರಿಷ್ಕರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿರ್ಧರಿಸಿದೆ. ಪರಿಷ್ಕರಣೆಯಲ್ಲಿ ಮೊದಲಿಗೆ ಭೌತವಿಜ್ಞಾನ ಹಾಗೂ ನಂತರ ರಸಾಯನವಿಜ್ಞಾನ, ಜೀವವಿಜ್ಞಾನ ವಿಷಯದ ಅಂಕ ಪರಿಗಣಿಸಲಾಗುತ್ತದೆ.

ಸದ್ಯದ ಮಾನದಂಡದ ಅನುಸಾರ ಮೊದಲಿಗೆ ಜೀವವಿಜ್ಞಾನ ಅಂಕ ಪರಿಗಣಿಸಿ, ನಂತರ ರಸಾಯನವಿಜ್ಞಾನ, ಭೌತವಿಜ್ಞಾನ ವಿಷಯದ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು.
ಈ ಸಂಬಂಧ 'ಪದವಿ ವೈದ್ಯ ಶಿಕ್ಷಣ ನಿಯಮಗಳು 2023' ಕುರಿತು ಜೂನ್ 2ರಂದು ಅಧಿಸೂಚನೆ ಹೊರಡಿಸಿದ್ದು, ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಪರಿಷ್ಕರಣೆಯ ವೇಳೆಯು ಸಮಾನ ಅಂಕವೇ ಉಳಿದಿದ್ದ ಸಂದರ್ಭದಲ್ಲಿ ಕಂಪ್ಯೂಟರ್ ಬಳಸಿ ಡ್ರಾ ಮೂಲಕ ಮೆರಿಟ್ ನಿರ್ಧರಿಸಲಾಗುತ್ತದೆ. ಡ್ರಾ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಮಾನವನ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಈ ವರ್ಷದ ನೀಟ್ ಪರೀಕ್ಷೆ ಫಲಿತಾಂಶವು ಜೂನ್ 13ರಂದು ಪ್ರಕಟವಾಗಿದೆ.