ಆಲಪ್ಪುಳ: ನಕಲಿ ಪ್ರಮಾಣಪತ್ರ ವಿವಾದ ಪ್ರಕರಣದಲ್ಲಿ ನಿಖಿಲ್ ಥಾಮಸ್ ನ ನಕಲಿ ಪದವಿ ಪ್ರಮಾಣಪತ್ರಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಳಿಂಗ ವಿಶ್ವವಿದ್ಯಾಲಯದ ಹೆಸರಿನಲ್ಲಿದ್ದ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮಾಣಪತ್ರಗಳನ್ನು ನಿಖಿಲ್ ಮನೆಯಲ್ಲಿ ಬಚ್ಚಿಟ್ಟಿದ್ದ. ನಕಲಿ ಪ್ರಮಾಣಪತ್ರ ನೀಡಿರುವ ಎರ್ನಾಕುಳಂನ ಓರಿಯನ್‍ನಲ್ಲಿ ಇಂದು ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಕಾಯಂಕುಳಂ ಮಾರುಕಟ್ಟೆ ಬಳಿಯ ನಿಖಿಲ್ ನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ನಕಲಿ ಪದವಿ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಳಿಂಗ ವಿಶ್ವವಿದ್ಯಾಲಯದ ಹೆಸರಿನಲ್ಲಿ ಬಿ.ಕಾಂ (ಬ್ಯಾಂಕಿಂಗ್ ಮತ್ತು ಹಣಕಾಸು) ಎಂದು ಗುರುತಿಸಲಾದ ಪದವಿ ಪ್ರಮಾಣ ಪತ್ರದ ಜತೆಗೆ ಮೂರು ವರ್ಷದ ಅಂಕಪಟ್ಟಿ, ಟ್ರಾನ್ಸ್ ಫರ್ ಪ್ರಮಾಣ ಪತ್ರ ಇತ್ಯಾದಿಗಳಿದ್ದವು. ಬಿಕಾಂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ಅಂಕಪಟ್ಟಿ ಹೇಳುತ್ತದೆ.
ನಿಖಿಲ್ ರೂಮಿನ ಕಬೋರ್ಡ್ ನಲ್ಲಿ ಸರ್ಟಿಫಿಕೇಟ್ ಗಳು ಇದ್ದವು. ಹಠಾತ್ ತಲೆಮರೆಸಿಕೊಳ್ಳಬೇಕಾಗಿ ಬಂದಿದ್ದರಿಂದ ಇದನ್ನು ಮುಚ್ಚಿಡಲಾಗಲಿಲ್ಲ. ಪೋಲೀಸರು ನಿಖಿಲ್ ಖಾತೆಯ ವಿವರವನ್ನೂ ಸಂಗ್ರಹಿಸಿದ್ದಾರೆ. ಶನಿವಾರ ಬೆಳಗ್ಗೆ ಕೊಟ್ಟಾಯಂ ಬಸ್ ನಿಲ್ದಾಣದಿಂದ ನಿಖಿಲ್ ನನ್ನು ಪೋಲೀಸರು ಬಂಧಿಸಿದ್ದರು. ನಕಲಿ ಪ್ರಮಾಣ ಪತ್ರ ಸಿದ್ಧಪಡಿಸಿದ್ದಕ್ಕಾಗಿ ಎಸ್ ಎಫ್ ಐ ಮಾಜಿ ಮುಖಂಡ ಅಬಿನ್ ಸಿ. ರಾಜುಗೆ 2 ಲಕ್ಷ ಹಣ ನೀಡಿರುವುದಾಗಿ ನಿಖಿಲ್ ಹೇಳಿಕೆ ನೀಡಿದ್ದ. ಅಬಿನ್‍ನ ತಾಯಿ ಖಾತೆಯ ಮೂಲಕ ಹಣ ವರ್ಗಾವಣೆಯಾಗಿರುವುದನ್ನು ಪೋಲೀಸರು ಪತ್ತೆ ಹಚ್ಚಿದ್ದಾರೆ.
ಏತನ್ಮಧ್ಯೆ ನಿಖಿಲ್ ನ ಮೊಬೈಲ್ ಪೋನ್ ಇನ್ನೂ ಪತ್ತೆಯಾಗಿಲ್ಲ. ನಿಖಿಲ್ ತಲೆಮರೆಸಿಕೊಂಡಾಗ ಹಣ ಸಂಪೂರ್ಣ ಮುಗಿಯಿತು. ಮೊಬೈಲ್ ಪೋನ್ ಚರಂಡಿಗೆ ಎಸೆದಿರುವುದಾಗಿ ನಿಖಿಲ್ ಹೇಳಿದ್ದಾನೆ.