ತಿರುವನಂತಪುರಂ: ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿ ತೀರ್ಪು ನೀಡಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ನ್ಯಾಯಾಧೀಶರ ಕಾರನ್ನು ಹೊಡೆದು ಹಾಕಿರುವ ಘಟನೆ ಕೇರಳದ ತಿರುವಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ 55 ವರ್ಷದ ವ್ಯಕ್ತಿ ನ್ಯಾಯಾಲಯದಿಂದ ಹೊರ ಬಂದ ಬಳಿಕ ಜಡ್ಜ್ ಕಾರಿನ ಗ್ಲ್ಯಾಸ್ಅನ್ನು ಪುಡಿ ಮಾಡಿ ತನ್ನ ಆಕ್ರೋಶವನ್ನು ಹೊರಹಾಕುತ್ತಿರುವುದನ್ನು ನೋಡಬಹುದಾಗಿದೆ.
3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!
ಎಲ್ಲರೂ ಅವಳ ಪರವಾಗಿ ಕೆಲಸ ಮಾಡುತ್ತಿದ್ಧಾರೆ
ಘಟನೆಕಯ ಕುರಿತು ಪ್ರತಿಕ್ರಿಯಿಸಿರುವ ತಿರುವಲ್ಲಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ನ್ಯಾಯಾಲಯದ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು FIR ದಾಖಲಿಸಲಾಗಿದೆ. ತನ್ನ ಪತ್ನಿಯೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದ ಆರೋಪಿಯೂ ತನಗೆ ನ್ಯಾಯ ಸಿಗುತ್ತಿಲ್ಲ ವಿಚ್ಛೇದನ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ.
ಆದರೆ, ಆತನ ವಿರುದ್ಧ ಪತ್ನಿಯೇ ಮೊದಲಿಗೆ ಡಿವೊರ್ಸ್ ಅರ್ಜಿ ಹಾಕಿದ್ದಳು. ತನ್ನ ಪತ್ನಿ ಪರವಾಗಿ ವಾದಿಸುತ್ತಿರುವ ವಕೀಲರು ಹಾಗೂ ನ್ಯಾಯಾಧೀಶರು ನ್ಯಾಯಾಲಯದಲ್ಲಿ ತನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿ ಜಡ್ಜ್ ಕಾರಿನ ಮೇಲೆ ದಾಳಿ ಮಾಡಿದ್ಧಾನೆ. 2017ರಲ್ಲಿ ಆರೋಪಿಯೂ ತನ್ನ ಪತ್ನಿ ಕಿರುಕುಳ ನೀಡುತ್ತಿದ್ಧಾಳೆ ತನಗೆ ವಿಚ್ಛೇದನ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದ ಎಂದು ತಿರುವಲ್ಲಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.