ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಮತ್ತು ಕನ್ನಡ-ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ'ಕಾಸರಗೋಡು ಕನ್ನಡ ಹಬ್ಬ'ದ ಅಂಗವಾಗಿ ಪೆರ್ಲ ಸನಿಹದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ಶ್ರದ್ಧಾ ನಾಯರ್‍ಪಳ್ಳ ಹಗೂ ಸುಧಾ ನಾಯರ್‍ಪಳ್ಳ ಸಹೋದರಿಯರಿಂದ ಕರ್ಣಾವಸಾನ ಕಥಾನಕದ ಗಮಕ ವಾಚನ-ವ್ಯಾಖ್ಯನ ಹಾಗೂ ಕಲಾರತ್ನ ಶಂ.ನಾ ಅಡಿಗ ಕುಂಬಳೆ ಅವರಿಂದ ಶ್ರೀ ಸುಬ್ರಹ್ಮಣ್ಯ ಮಹಿಮೆ ಹರಿಕಥೆ ನಡೆಯಿತು. ಕಾಟುಕುಕ್ಕೆ ಭಜನಾ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಗಿತ್ತು.
ದೇವಸ್ಥಾನದ ಮುಖ್ಯ ಅರ್ಚಕ ಮಧುಸೂಧನ ಪುಣಿಂಚಿತ್ತಾಯ ಸಮಾರಂಭ ಉದ್ಘಾಟಿಸಿರು. ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲ್‍ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾ ಸಂಸ್ಥೆ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗಡಿನಾಡಿನಲ್ಲಿ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸುವ ಮೂಲಕ ಇಲ್ಲಿನ ಕನ್ನಡದ ಕಂಪನ್ನು ಪಸರಿಸುತ್ತಿರುವ ಸಂಘಟನೆಗಳಲ್ಲಿ ರಂಗಚಿನ್ನಾರಿ ಶ್ರಮ ಶ್ಲಾಘನೀಯ. ಗಡಿನಾಡಿನಲ್ಲಿ ಮತ್ತಷ್ಟು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಕನ್ನಡಿಗರಲ್ಲಿ ಸ್ಪೂರ್ತಿ ತುಂಬುವ ಕೆಲಸ ಸಂಸ್ಥೆಯಿಂದ ನಡೆಯಲಿ ಎಂದು ಹಾರೈಸಿದರು.
ರಂಗ ಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಳ್ಳಿಗಳಲ್ಲಿರುವ ಕನ್ನಡದ ಮನಸ್ಸನ್ನು ಒಂದುಗೂಡಿಸಿ, ಅವರಲ್ಲಿ ಕನ್ನಡತನವನ್ನು ಮತ್ತಷ್ಟು ಉದ್ದೀಪನಗೊಳಿಸುವ ಕೆಲಸ ನಡೆಸುವುದು ರಂಗಚಿನ್ನಾರಿ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗಡಿನಾನಡಿನ ಹಳ್ಳಿ ಪ್ರದೇಶಗಳನ್ನು ಆಯ್ದುಕೊಂಡು ಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಂಗ ಚಿನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು ಉಪಸ್ಥಿತರಿದ್ದರು. ಭಜನಾ ಟ್ರಸ್ಟ್ ನಿರ್ದೇಶಕ, ಹರಿದಾಸ ರಾಮಚಂದ್ರ ಮಣಿಯಾಣಿ ಸ್ವಾಗತಿಸಿದರು. ಕಿಶೋರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ವಂದಿಸಿದರು.