ಕಾಸರಗೋಡು: ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರ 70ನೇ ಜನ್ಮದಿನಾಚರಣೆ'ಸಪ್ತತಿ ಆಚರಣೆ'ಕಾರ್ಯಕ್ರಮ ಜೂ. 23ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರದ ಚಿನ್ಮಯ ಆಡಿಟೋರಿಯಂನಲ್ಲಿ ಜರುಗಲಿದೆ. ಗೋವಾ ರಾಜ್ಯಪಾಲ, ವಕೀಲ ಪಿ.ಎಸ್. ಶ್ರೀಧರನ್ ಪಿಳ್ಳೆ ಸಮಾರಂಭ ಉದ್ಘಾಟಿಸುವರು. ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ ನಾಯರ್ ಅಧ್ಯಕ್ಷತೆ ವಹಿಸುವರು. ಕೋಯಿಕ್ಕೋಡ್ ಕೊಳತ್ತೂರ್ ಅದ್ವೈತಾಶ್ರಮದ ಸಂಪೂಜ್ಯ ಸ್ವಾಮಿ ಚಿದಾನಂದ ಪುರಿ ಆಶೀರ್ವಚನ ನೀಡುವರು. ಸಿಎಸ್‍ಟಿಕೆ ಮುಖ್ಯ ಸೇವಕ್ ಆರ್. ಸುರಶ್‍ಮೋಹನ್, ಎ.ಗೋಪಾಲಕೃಷ್ಣನ್ ಭಾಗವಹಿಸುವರು.
ಈ ಸಂದರ್ಭ ಶಾಲಾ ವಠಾರದಲ್ಲಿ ನಿರ್ಮಿಸಿರುವ ಈಜುಕೊಳದ ಉದ್ಘಾಟನೆ ನಡೆಯುವುದು. ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಪ್ತತಿ ಆಚರಣೆ ಅಂಗವಾಗಿ ಕಾಸರಗೋಡು ಚಿನ್ಮಯ ಮಿಷನ್ ವಿವಿಧ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿರುವುದಾಘಿ ಪ್ರಕಟಣೆ ತಿಳಿಸಿದೆ.