ಕೊಚ್ಚಿ: ಕೊಲೆ ಪ್ರಕರಣದ ವಿಚಾರಣೆಯನ್ನು ಅಂತ್ಯಗೊಳಿಸದೆ ಸಾಕ್ಷ್ಯ ನಾಶಪಡಿಸಲು ಆದೇಶಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಂದ ಹೈಕೋರ್ಟ್ ವರದಿ ಕೇಳಿದೆ.
ಕೊಲ್ಲಂ ಮೈಲಕ್ಕಟ್ ಜೋಸ್ ಸಹಾಯನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶದ ವಿರುದ್ಧ ಹೈಕೋರ್ಟ್ ಈ ಆದೇಶ ನೀಡಿದೆ.
ಪ್ರಕರಣದ ಆರೋಪಿಗಳ ಖುಲಾಸೆ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಜಿಲ್ಲಾ ನ್ಯಾಯಾಧೀಶರು ಸಾಕ್ಷ್ಯ ನಾಶಕ್ಕೆ ಆದೇಶಿಸಿದರು. ಮೇಲ್ಮನವಿ ಬಾಕಿ ಇರುವುದರಿಂದ ಕೊಲೆಯಾದ ಜೋಸ್ ಸಹಾಯನ ಪತ್ನಿ ಸಾಕ್ಷ್ಯ ನಾಶ ತಡೆಯುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಸಾಕ್ಷ್ಯ ವಸ್ತುಗಳನ್ನು ನಾಶಪಡಿಸುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದರು.
ಆರೋಪಿಗಳನ್ನು ಖುಲಾಸೆಗೊಳಿಸಿದ 25ನೇ ದಿನದಂದು ಜೋಸ್ ಅವರ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು. ಸಾಕ್ಷ್ಯ ನಾಶಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮೇಲ್ಮನವಿ ಅವಧಿ ಅರವತ್ತು ದಿನಗಳ ತನಕ ಸಾಕ್ಷ್ಯ ಕಾಪಿಡಬೇಕು ಎಂಬುದು ನಿಯಮ. ಇವುಗಳನ್ನು ನಾಶಪಡಿಸಲಾಗಿದೆಯೇ ಎಂಬುದನ್ನು ಸೂಚಿಸಿ ವರದಿ ನೀಡುವಂತೆಯೂ ಕೋರ್ಟ್‍ಗೆ ಹೈಕೋರ್ಟ್ ಹೇಳಿದೆ.