ಬದಿಯಡ್ಕ: ಜಗತ್ತಿಗೆಲ್ಲ ತಂಪು ನೀಡುವ ಗಿಡ ಮರ ನೆಟ್ಟು ಪ್ಲಾಸ್ಟಿಕ್ ಮುಕ್ತ ಶಾಲಾ ಪರಿಸರ ಆಚರಿಸುವ ನಿಟ್ಟಿನಲ್ಲಿ ಪೆರಡಾಲ ಸರ್ಕಾರಿ ಶಾಲೆಯಲ್ಕಲಿ ಸೋಮವಾರ ಪರಿಸರ ದಿನಾಚರಣೆ ಆಚರಿಸಲಾಯಿತು. ಎಕ್ಸೈಸ್ ಆಫೀಸರ್ ವಿನು ಅವರು ಶಾಲಾ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬೀನಾ ಟೀಚರ್ ದಿನದ ಮಹತ್ವ ವಿವರಿಸಿದರು. ವಿದ್ಯಾರ್ಥಿನಿ ಶ್ರೀನಂದಾ ಪರಿಸರ ಪ್ರತಿಜ್ಞೆ ಮಕ್ಕಳಿಗೆ ಬೋಧಿಸಿದರು. ಲಾವಣ್ಯ ಭಾಷಣ ಮಾಡಿದರು. ಶಾಲಾ ನಾಯಕಿ ಫಾತಿಮ ಪರಿಸರ ರಕ್ಷಣೆಯ ವಿಧಾನ ತಿಳಿಸಿದರು. ಶ್ರೀಧರನ್ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್, ಪ್ರಸೀತಾ, ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಮಹಮ್ಮದ್ ಕರೋಡಿ, ರಾಮ ಉಪಸ್ಥಿತರಿದ್ದರು. ಚಿತ್ರ, ಪೋಸ್ಟರ್ ರಚನೆ, ಪರಿಸರ ಶುಚೀಕರಣ, ಗಿಡ ನೆಡುವಿಕೆ, ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಪೆರಡಾಲ ಶಾಲೆ:ಪರಿಸರ ದಿನಾಚರಣೆ
0
ಜೂನ್ 06, 2023