ಬದಿಯಡ್ಕ: ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿರುವ ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಮುಳ್ಳೇರಿಯ ಹವ್ಯಕ ಮಂಡಲ ವತಿಯಿಂದ ಶ್ರಮದಾನ ಯಶಸ್ವಿಯಾಗಿ ಜರಗಿತು. ಗರ್ಭಗುಡಿ ಮತ್ತು ತೀರ್ಥಮಂಟಪದ ಪಂಚಾಂಗ ಸ್ಥಳದ ಕಲ್ಲು ಮಣ್ಣನ್ನು ಅಗೆದು ಸಾಗಿಸಲಾಯಿತು.
ಮಂಡಲ ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹರಿಪ್ರಸಾದ್ ಪೆರ್ಮುಖ, ಗೋವಿಂದ ಬಳ್ಳಮೂಲೆ, ವಲಯ ಪದಾಧಿಕಾರಿಗಳು, ಶಿಷ್ಯರು,ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು
ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಕಾರ್ಯಕ್ರಮ ಸಂಯೋಜನೆ ಮಾಡಿದರು.