ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲಿನಲ್ಲಿ ದ್ವಿತೀಯ ದಿನ "ಸಾಹಿತ್ಯ ಸಿರಿ" ಕವಿಗೋಷ್ಠಿ ಜರಗಿತು. ಕವಯತ್ರಿ,ಶಿಕ್ಷಕಿ ಸೀತಾಲಕ್ಷ್ಮಿ ವರ್ಮ ವಿಟ್ಲ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಕವಿ,ಪತ್ರಕರ್ತ ರಾಧಾಕೃಷ್ಣ ಕೆ, ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಗಡಿನಾಡ ಸಾಹಿತ್ಯಘಟಕದ ಅಧ್ಯಕ್ಷ ಯಸ್.ವಿ.ಭಟ್, ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ, ಶಿವರಾಮ ಕಾಸರಗೋಡು ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕು. ಶ್ರದ್ಧಾ ಹೊಳ್ಳ ಮುಳಿಯಾರು ಅವರ "ಮಾತು- ಮೌನ- ಕೃತಿ" ಅವಲೋಕನವನ್ನು ಸುಜಾತಾ ಮಾಣಿಮೂಲೆ ನಡೆಸಿದರು. ವ್ಯಂಗಚಿತ್ರಕಾರ ಚುಟುಕು ಕವಿ ವೆಂಕಟ್ ಭಟ್ ಎಡನೀರು ಅವರ "ಭಟ್ಟಂಗೋಣಿ" ವ್ಯಂಗಚಿತ್ರ ಪ್ರದರ್ಶನ ಜರಗಿತು. ಬಳಿಕ ನಡೆದ ಕವನ ವಾಚನ-- ಗಾಯನದಲ್ಲಿ ವೆಂಕಟ ಭಟ್ ಎಡನೀರು,ದಯಾನಂದ ರೈ ಕಳುವಾಜೆ,ಪ್ರಮೀಳಾ ಚುಳ್ಳಿಕಾನ ಸ್ನೇಹಲತಾ ದಿವಾಕರ್ ಕುಂಬಳೆ, ಸತ್ಯನಾರಾಯಣ ಬೇಳೇರಿ, ನಿರ್ಮಲಾ ಶೇಷಪ್ಪ ಖಂಡಿಗೆ, ಬಾಲಕೃಷ್ಣ ಬೇರಿಕೆ, ಶ್ಯಾಮಲಾ ರವಿರಾಜ್, ಸುಂದರ ಬಾರಡ್ಕ, ಮೀರಾ ಹರೀಶ್ ಉಳಿಯ, ಪುರುಷೋತ್ತಮ ಭಟ್, ಪುದುಕೋಳಿ, ವನಜಾಕ್ಷಿ, ಚೆಂಬ್ರಕಾನ, ಶಂಕರ ಸ್ವಾಮಿ ಕೃಪಾ, ರಂಜಿತಾ ಪಟ್ಟಾಜೆ, ಸುಜಾತಾ ಕನಿಯಾಲ, ಜಯ ಮಣಿಯಂಪಾರೆ, ಶ್ರದ್ದಾ ಹೊಳ್ಳ ಮುಳಿಯಾರು, ತೇಜಸ್ವಿನಿ ಕಂಬಾರು ಭಾಗವಹಿಸಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಪ್ರಸ್ತಾವನೆಗೈದರು. ಜಗದೀಶ ಕೆ. ಕೂಡ್ಲು ಸ್ವಾಗತಿಸಿ, ಪ್ರಶಾಂತ್ ಹೊಳ್ಳ ನೀರಾಳ ವಂದಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು.