ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಇಂದು(ಜೂ.25) ತೆಂಕು ತಿಟ್ಟು ಯಕ್ಷಗಾನ ಭಾಗವತಿಕೆ ಶಿಬಿರ ನಡೆಯಲಿದೆ. ಯಕ್ಷಗಾನ ಭಾಗವತಿಕೆಗೆ ಒಂದು ನಿರ್ದಿಷ್ಟ ವ್ಯಾಪ್ತಿ ಇದೆ. ಅದನ್ನು ಮೀರಿದ ಪ್ರಯೋಗ ನಡೆಸಿ ವಿರೂಪ ಗೊಳಿಸಬಾರದು. ಆ ಉದ್ದೇಶ ವಿರಿಸಿ ನಡೆಯುವ ವಿಶೇಷ ಕಾರ್ಯಾಗಾರ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9 ರಿಂದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯುವ ಕಾರ್ಯಾಗಾರವನ್ನು ತೆಂಕುತಿಟ್ಟು ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸುವರು. ಕಂಠಸ್ವರ ರಕ್ಷಣೆಗೆ ಯೋಗ, ಭಾಗವತನ ಕರ್ತವ್ಯ, ಛಂದಸ್ಸಿಗೆ ಲೋಪವಾಗದೆ ಹಾಡುಗಾರಿಕೆ, ಹಿಮ್ಮೇಳ- ಮುಮ್ಮೇಳದ ಸಾಂಗತ್ಯ, ಪ್ರಸಂಗ ಮಾಹಿತಿ, ಪೂರ್ವರಂಗದ ವೈಶಿಷ್ಟ್ಯ ಇತ್ಯಾದಿ ವಿಷಯಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ- ಆಸಕ್ತ ರಿಗೆ ಅವಕಾಶ ಮೂಲಕ ಶಿಬಿರ ನಡೆಯಲಿದೆ. ಶಿಬಿರಾರ್ಥಿಗಳಲ್ಲದೆ ಯಕ್ಷಗಾನ ಯುವ ವೃತ್ತಿ- ಹವ್ಯಾಸಿ ಭಾಗವತರು, ಕಲಾವಿದರು ಭಾಗವಹಿಸುವರು.