ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಒಬ್ಬೊಬ್ಬ ನಕ್ಸಲನ ತಲೆಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ ಒಬ್ಬೊಬ್ಬ ನಕ್ಸಲನ ತಲೆಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಮಾವೋವಾದಿ ಸಿದ್ಧಾಂತದ 'ಅಮಾನವೀಯ' ಮತ್ತು ಹುಸಿ ಸಿದ್ಧಾಂತಗಳ ಬಗ್ಗೆ ನಿರಾಶೆಗೊಳಗಾಗಿ ಬಂಡುಕೋರರು ಬುಧವಾರ ಸಂಜೆ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕ್ಸಲರನ್ನು, ಮಾವೋವಾದಿಗಳ ಸಾಂಸ್ಕೃತಿಕ ವಿಭಾಗವಾದ ಚೇತನ ನಾಟ್ಯ ಮಂಡಳಿ (ಸಿಎನ್‌ಎಂ) ಕಮಾಂಡರ್ ವೆಟ್ಟಿ ರಾಜ ಮತ್ತು ಮಿಲಿಟರಿ ಸದಸ್ಯ ರಾವ ಸೋಮ ಎಂದು ಪೊಲೀಸರು ಗುರುತಿಸಿದ್ದಾರೆ.
ಜಿಲ್ಲಾ ಪೊಲೀಸರ ಪುನರ್ವಸತಿ ಅಭಿಯಾನ 'ಪುನಾ ನಾರ್ಕೊಮ್' ಎಂಬ ನಕ್ಸಲರ ಪುನರ್ವಸತಿ ಅಭಿಯಾನದಿಂದ ತಾವು ಪ್ರಭಾವಿತರಾಗಿ, ಶರಣಾಗಿದ್ದೇವೆ ಎಂದು ಇಬ್ಬರೂ ನಕ್ಸಲರು ಪೊಲೀಸರಿಗೆ ತಿಳಿಸಿದ್ದಾರೆ.
ಶರಣಾದ ನಕ್ಸಲರಿಗೆ ಛತ್ತೀಸ್‌ಗಢ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರಕಾರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.