ಪೆರ್ಲ: ಒಐಸಿಸಿ ಜಿದ್ಧಾ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಎಸ್ಸಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಪೆರ್ಲದ ಇಂದಿರಾ ಭವನದಲ್ಲಿ ಜರಗಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಒಐಸಿಸಿ ಜಿದ್ಧಾ ಕಾಸರಗೋಡು ಸಮಿತಿ ಅಧ್ಯಕ್ಷ ಎಂ.ಎಚ್.ಅರಿಸ್ ಶೇಣಿ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ಮಹಿಳಾ ಸಮಿತಿ ಪದಾಧಿಕಾರಿ ಜಯಶ್ರೀ ಕುಲಾಲ್, ಕುಸುಮಾವತಿ, ರಸಾಕ್ ನಲ್ಕ, ವಿಲ್ಫ್ರೆಡ್ ಡಿಸೋಜ,ಅಬ್ದುಲ್ಲ ಕುರೆಡ್ಕ, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಫಾರೂಕ್ ಮಲಂಗರೆ,ಮಾಯಿಲ ನಾಯ್ಕ, ಹರಿಪ್ರಸಾದ್, ನೌμÁದ್ ಕುದ್ರೆಡ್ಕ, ಜಬ್ಬಾರ್ ನಲ್ಕ, ಶೇರಿಫ್ ಪೆರ್ಲ ಮೊದಲಾದವರು ಭಾಗವಹಿಸಿದ್ದರು. ಅಖೀಪ್ ನೂರ ಸ್ವಾಗತಿಸಿ, ಶಕೀರ್ ಜಮಾಲ್ ವಂದಿಸಿದರು.