HEALTH TIPS

ಸುಳ್ಯ-ಪಾಣತ್ತೂರು- ಕಾಞಂಗಾಡ್ ಬಸ್ ಸಂಚಾರ ಪುನರಾರಂಭ

           ಮುಳ್ಳೇರಿಯ: ಭಾನುವಾರದಿಂದ ಸುಳ್ಯ-ಪಾಣತ್ತೂರು- ಕಾಞಂಗಾಡ್ ಅಂತಾರಾಜ್ಯ ರಸ್ತೆಯಲ್ಲಿ ಕೇರಳ ಸಾರಿಗೆ ಸಂಸ್ಥೆಯ ಮತ್ತೊಂದು ಬಸ್ ಸರ್ವೀಸ್ ಆರಂಭಗೊಂಡಿದೆ. ಅಪರಾಹ್ನ 3.10ಕ್ಕೆ ಪಾಣತ್ತೂರಿನಿಂದ ಹೊರಡುವ ಬಸ್ 4.10ಕ್ಕೆ ಸುಳ್ಯಕ್ಕೆ ತಲಪಿ, 4.35ಕ್ಕೆ ಸುಳ್ಯದಿಂದ ಹೊರಟು 5.35ಕ್ಕೆ ಪಾಣತ್ತೂರು ತಲುಪಲಿದೆ. ಪ್ರಸ್ತುತ ಬೆಳಿಗ್ಗೆ ಮಾತ್ರ ಒಂದು ಬಸ್ ಸರ್ವೀಸ್ ನಡೆಸುತ್ತಿತ್ತು. ಬೆಳಿಗ್ಗೆ 7.20ಕ್ಕೆ ಪಾಣತ್ತೂರಿನಿಂದ ಹೊರಟು 8.20 ಸುಳ್ಯಕ್ಕೆ ತಲಪಿ, ಸುಳ್ಯದಿಂದ 8.45 ಕ್ಕೆ ಹೊರಟು 9.55 ಕ್ಕೆ ಪಾಣತ್ತೂರು ತಲುಪುತಿದೆ. 

          2016 ಸೆಪ್ಟೆಂಬರ್ 25ರಂದು ಕಾಞಂಗಾಡು-ಪಾಣತ್ತೂರು-ಸುಳ್ಯ ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಅಂತಾರಾಜ್ಯ ಮಾರ್ಗದಲ್ಲಿ ಐದು ಬಸ್‍ಗಳ ಪ್ರಯಾಣ ಆರಂಭಗೊಂಡಿತ್ತು. ಪಾಣತ್ತೂರು-ಸುಳ್ಯ ರಸ್ತೆ ಹದಗೆಟ್ಟಿದ್ದರಿಂದ ಕೆಲವು ಬಸ್ಸು ಗಳು ಪಾಣತ್ತೂರು ತನಕ ಮಾತ್ರ ಸರ್ವೀಸ್ ನಡೆಸಲಾಗುತ್ತಿತ್ತು. ಎರಡು ಬಸ್‍ಗಳು ಮಾತ್ರ ಸುಳ್ಯ ತನಕ ಬರುತ್ತಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ಅಂತಾರಾಜ್ಯ ರಸ್ತೆಯಲ್ಲಿ ಬಸ್‍ಗಳ ಓಡಾಟ ಸ್ಥಗಿತಗೊಂಡಿತ್ತು.

           ಬಳಿಕ ಎರಡು ಬಸ್ ಸರ್ವೀಸ್ ಆರಂಭಿಸಿದರೂ ಒಂದು ಬಸ್ ಓಡಾಟ ನಿಲ್ಲಿಸಿತು. ಇದೀಗ ರಸ್ತೆ ಸಂಚಾರ ಯೋಗ್ಯವಾಗಿದೆ, ಎಲ್ಲಾ ಐದು ಬಸ್‍ಗಳು ಓಡಾಟ ಆರಂಭಿಸಬೇಕು ಎಂದು ಪರಪ್ಪ ಬ್ಲಾಕ್ ಪಂಚಾಯತಿ ಸದಸ್ಯ ಅರುಣ್ ರಂಗತ್ತಮಲೆ ನೇತೃತ್ವದಲ್ಲಿ ಸಂಬಂಧಪಟ್ಟವರನ್ನು ಒತ್ತಾಯಿಸಿದ ಮೇರೆಗೆ ಮತ್ತೊಂದು ಬಸ್ ಆರಂಭವಾಗಿದೆ. ಸುಳ್ಯ-ಕಾಂಞಂಗಾಡ್ ಮಾರ್ಗದಲ್ಲಿ ಮಂಜೂರಾದ ಬಸ್‍ಗಳು ಈಗ ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಸುಳ್ಯ ಮಾರ್ಗವಾಗಿ ಸಂಚರಿಸುವ ಐದು ಬಸ್ಸುಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂಜೆಯ ವೇಳೆಗೆ ಇನ್ನೊಂದು ಬಸ್ ಆರಂಭಗೊಂಡಿದೆ. ಉಳಿದ ಮೂರು ಬಸ್ಸುಗಳನ್ನೂ ಪುನರಾರಂಭಿಸಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲಾ ಐದು ಬಸ್ಸುಗಳು ಓಡಾಟ ಅರಂಭಿಸುವ ನಿರೀಕ್ಷೆ ಇದೆ ಎಂದು ಅರುಣ್ ರಂಗತ್ತಮಲೆ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries