ಪೆರ್ಲ: ಕಾಟುಕುಕ್ಕೆ ಯಕ್ಷೋತ್ಸವ-ಯಕ್ಷಗಾನ ಪ್ರದರ್ಶನ, ಯಕ್ಷಗಾನ ಪ್ರದರ್ಶನ, ಯಕ್ಷಗಾನ ತಾಳಮದ್ದಲೆ, ಸನ್ಮಾನ, ಕಾಟುಕುಕ್ಕೆ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಜೂ. 24ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ. ಮಧ್ಯಾಹ್ನ 2ರಿಂದ ಮರುದಿನ ಸೂರ್ಯೋದಯದ ವರೆಗೆ ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 2ಗಂಟೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ 'ಅಂಬಾ ಶಪಥ' ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ ಸಬ್ಬಣಕೋಡಿ ರಾಮ ಭಟ್ ನಿರ್ದೇಶನದಲ್ಲಿಪಡ್ರೆ ಚಂದು ಸಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಸದಸ್ಯರಿಂದ 'ರಾಜಾ ದಿಲೀಪ'ಯಕ್ಷಗನ ಬಯಲಾಟ ನಡೆಯುವುದು. ರಆತ್ರಿ 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಗುರು ಭಿಕ್ಷಾ ವಂದನೆ ಸಲ್ಲಿಸಲಾಗುವುದು. ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್, ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ, ಸುಬ್ರಹ್ಮಣ್ಯ ನೆಟ್ಟೋಜಿ ಉಪಸ್ಥಿತರಿರುವರು. ಈ ಸಂದರ್ಭ ಕಾಟುಕುಕ್ಕೆ ಯಕ್ಷೋತ್ಸವ ಪ್ರಶಸ್ತಿ ಪ್ರದಾನ, ಅಭಿನಂದನೆ, ಸನ್ಮಾನ ಸಮಾರಂಭ ನಡೆಯುವುದು. ರಾತ್ರಿ 9ರಿಂದ ಪ್ರಸಿದ್ಧ ಕಲಾವಿದರ ಕುಡುವಿಕೆಯೊಂದಿಗೆ'ಮಹಾಕಲಿ ಮಗಧೇಂದ್ರ-ಶ್ರೀನಿವಾಸ ಕಲ್ಯಾಣ'ಯಕ್ಷಗಾನ ಬಯಲಾಟ ನಡೆಯುವುದು.