ಢಾಕಾ (PTI): ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಬಾಂಗ್ಲಾದೇಶದ ಸೇನ ಮುಖ್ಯಸ್ಥ ಎಸ್.ಎಂ. ಶೈಫಿಯುದ್ದೀನ್ ಅಹಮದ್ ಮತ್ತು ಸಶಸ್ತ್ರ ಪಡೆಗಳ ಮುಖ್ಯ ಸೇನಾ ಅಧಿಕಾರಿ ವಾಕರ್- ಉಜ್- ಜಮನ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ದ್ವಿಪಕ್ಷೀಯ ಹಿತಾಸಕ್ತಿ, ರಕ್ಷಣೆ ಮತ್ತು ಭದ್ರತಾ ವಲಯದಲ್ಲಿಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಸೇರಿ ಹಲವಾರು ವಿಷಯಗಳ ಕುರಿತು ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸಿದರು ಎನ್ನಲಾಗಿದೆ.
ಶಿಖಾ ಅನಿರ್ಬನ್ ಸ್ಮಾರಕಕ್ಕೆ ಭೇಟಿ ನೀಡಿ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಪಾಂಡೆ ಗೌರವ ಸಲ್ಲಿಸಿದರು. ಢಾಕಾದಲ್ಲಿಯ ಸ್ನೇಹಕುಂಜ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮನೋಜ್ ಪಾಂಡೆ ಅವರಿಗೆ 'ಗಾರ್ಟ್ ಆಫ್ ಆನರ್' ನೀಡಿ ಗೌರವಿಸಲಾಯಿತು.