ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2025 ಜ.19ರಿಂದ 24ರ ತನಕ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ಧನ ಸಂಗ್ರಹ ಸಮಾರಂಭ ಜೂ.11ರಂದು ಬೆಳಿಗ್ಗೆ 10ರಿಂದ ನಡೆಯಲಿದೆ.
ಬ್ರಹ್ಮಶ್ರೀ ವಾಸುದೇವ ತಂತ್ರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪೆರುಂಕಳಿಯಾಟ ಮಹೋತ್ಸವದ ವಿe್ಞÁಪನಾ ಪತ್ರ ಬಿಡುಗಡೆಗೊಳಿಸುವರು. ಧನ ಸಂಗ್ರಹದ ಮೊದಲ ಕಂತು ಸ್ವೀಕಾರವನ್ನು ಕೊಂಡೆಯೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸುವರು. ಮಹೋತ್ಸವ ಸಮಿತಿ ಅಧ್ಯಕ್ಷ ಬಿಪಿನ್‍ದಾಸ್ ರೈ ಆದೂರುಗುತ್ತು ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಸಿಜಿ ಮೇಥ್ಯು, ಕಾರಡ್ಕ ಗ್ರಾಮ ಪಂ. ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಜನನಿ.ಎಂ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಸರ್, ಮೊಗ್ರಾಲ್ ಗ್ರಾಮ, ಪಂ. ಸದಸ್ಯೆ ಮಲ್ಲಿಕಾ ಪ್ರಭಾಕರÀ್ತುದ್ಯಮಿ ವಸಂತ ಪೈ ಬದಿಯಡ್ಕ, ಅನಂತಕೃಷ್ಣ ಚಡಗ ಮಿತ್ತಬೂಡು, ಕೃಷ್ಣ ಮಣಿಯಾಣಿ ಕಳತ್ತಿಲೆವೀಡ್, ಬಾಲಕೃಷ್ಣ ಚಳ್ಳಂಗೋಡು, ಸದಾಶಿವ ಮಣಿಯಾಣಿ ಕಾನಕ್ಕೋಡು, ಕೃಷ್ಣಯ್ಯ ಬಲ್ಲಾಳ್, ಗೀತಾದಾಮೋದರನ್, ಮುಳ್ಳೇರಿಯ ಚರ್ಚ್ ಮುಖ್ಯಸ್ಥ ಫಾದರ್ ಮ್ಯಾಥ್ಯು ಕುಡಿಲಿಲ್, ಆದೂರು ಜಮಾಅತ್ತ್ ಅಧ್ಯಕ್ಷ ಎ.ಕೆ.ಅಬ್ದುಲ್ ಖಾದರ್ ಹಾಜಿ, ಕಾನತ್ತೂರು ನಾಲ್ವರ್ ದೈವಸ್ಥಾನದ ಮೆನೇಜಿಂಗ್ ಟ್ರಸ್ಟಿ ಕೆ.ಪಿ.ಮಾಧವನ್ ನಾಯರ್, ದಾಮೋದರನ್ ಕಾವುಗೋಳಿ, ಆನಂದ ಕೊಟ್ಲು, ಶಲಿನಿ ಕೃಷ್ಣಪ್ಪ, ನಾರಾಯಣ.ಕೆ.ಕಾವುಗೋಳಿ, ಉಮೇಶ್.ಎನ್, ಹರಿಣಾಕ್ಷನ್ ಜೋಗಿಮೂಲೆ, ವೆಂಕಟ್ರಮಣ ಹೊಳ್ಳ, ರಘುರಾಮ ಬಲ್ಲಾಳ್, ಮಾಧವನ್ ಭಂಡಾರಮನೆ, ಹರಿಶ್ಚಂದ್ರ.ಆರ್.ಬೇರಿಕೆ ಭಾಗವಹಿಸುವರು.