HEALTH TIPS

ಅಂತಿಮ ಹಂತದಲ್ಲಿ ಉತ್ತರಾಖಂಡ ಯುಸಿಸಿ ಸಮಿತಿ ವರದಿ

              ವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಉತ್ತರಾಖಂಡದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ತನ್ನ ವರದಿ ನೀಡುವುದರ ಜೊತೆ ಯುಸಿಸಿಯ ಮಾದರಿ ಕರಡು ಮಸೂದೆಯನ್ನು ನೀಡುವ ಸಾಧ್ಯತೆ ಇದೆ.

              ವೈಯಕ್ತಿಕ ಕಾನೂನುಗಳನ್ನು ಸಾರ್ವತ್ರಿಕಗೊಳಿಸುವ ಇಚ್ಛೆ ಹೊಂದಿರುವ ಇತರ ರಾಜ್ಯಗಳಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾದರಿ ಕರಡು ಮಸೂದೆ ನೀಡಲು ಸಮಿತಿ ನಿರ್ಧರಿಸಿದೆ.

              ಕರಡು ಮಸೂದೆ ಮತ್ತು ವರದಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಮಸೂದೆಯು ಮದುವೆಯ ಕನಿಷ್ಠ ವಯಸ್ಸು, ನಿಖಾ ಹಲಾಲಾ ಮತ್ತು ಜವಾಬ್ದಾರಿಯುತ ಪೋಷಕತ್ವದಂಥ ಹಲವು ವಿಚಾರಗಳನ್ನು ಹೊಂದಿದೆ.

                 ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು 2022ರ ಮೇನಲ್ಲಿ ಯುಸಿಸಿ ಕುರಿತು ಸಮಿತಿ ನೇಮಿಸಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರು ಈ ಸಮಿತಿಯ ನೇತೃತ್ವ ವಹಿಸಿದ್ದಾರೆ.

               ಸಂಬಂಧಪಟ್ಟ ಹಲವರನ್ನು ಸಮಿತಿಯು ಕಳೆದ 12 ತಿಂಗಳಲ್ಲಿ ಸಂಪರ್ಕಿಸಿದೆ ಮತ್ತು 2.31 ಲಕ್ಷಕ್ಕೂ ಹೆಚ್ಚು ಲಿಖಿತ ಅಭಿಪ್ರಾಯವನ್ನು ಸ್ವೀಕರಿಸಿದೆ. ಮುಸ್ಲಿಂ ಮಹಿಳೆಯರೂ ಸೇರಿ 20 ಸಾವಿರಕ್ಕೂ ಹೆಚ್ಚು ಜನರು ಸಮಿತಿ ಎದುರು ಹಾಜರಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಡೆಯ ಬಾರಿ ಸಾರ್ವಜನಿಕ ಸಂವಾದವನ್ನು ಸಮಿತಿಯು ಜೂನ್‌ 14ರಂದು ದೆಹಲಿಯಲ್ಲಿ ಏರ್ಪಡಿಸಿತ್ತು. ಬಳಿಕವೇ ಸಮಿತಿಯು ವರದಿಗೆ ಅಂತಿಮ ರೂಪ ನೀಡಲು ಮುಂದಾಗಿದೆ.

                 ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ನೇಮಿಸಿರುವ ಸಮಿತಿಯೊಂದು ಅತ್ಯಂತ ವ್ಯಾಪಕವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ತಯಾರಿಸುತ್ತಿರುವ ವರದಿ ಇದಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್‌) ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆಗಿಂತ ಉತ್ತರಾಖಂಡ ಯುಸಿಸಿ ಸಮಿತಿಯ ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆಯು ಹೆಚ್ಚು ವಿಸ್ತೃತವಾಗಿದೆ ಎಂದು ಮೂಲಗಳು  ತಿಳಿಸಿವೆ.

              ಜವಾಬ್ದಾರಿಯುತ ಪೋಷಕತ್ವದ ಮೂಲಕ ಜನಸಂಖ್ಯೆ ನಿಯಂತ್ರಣವು ವರದಿಯ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದು ಎಂದು ಹೇಳಲಾಗಿದೆ.

                  ಈ ವರ್ಷದ ಆರಂಭದಲ್ಲಿ 'ಉತ್ತರಾಖಂಡ ಯುಸಿಸಿ ಸಮಿತಿ'ಯ ರಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ವಿಚಾರದಲ್ಲಿ ಮೂಗುತೂರಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ತಳ್ಳಿ ಹಾಕಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries