ಕಾಸರಗೋಡು: ಜನರಲ್ ಆಸ್ಪತ್ರೆ ಬಳಿಯಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನವೀಕರಿಸಿದ ಬ್ಯಾಂಕ್ ಶಾಖೆ ಮತ್ತು ಎಟಿಎಂ ಎಂಜಿ ರಸ್ತೆಯಲ್ಲಿ ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು. ಆರಂಭಿಕ ಗ್ರಾಹಕರಾಗಿ ಬ್ಯಾಂಕಿನ ಸೇವೆಗಳನ್ನು ಅವರು ಚಾಲನೆ ನೀಡಿದರು. ಯೂನಿಯನ್ ಬ್ಯಾಂಕ್‍ನ ಸೇವೆಗಳು ಹೊಸ ಪೀಳಿಗೆಯ ಬ್ಯಾಂಕ್‍ಗಳಿಗೆ ಪೈಪೆÇೀಟಿ ನೀಡಬಲ್ಲವು ಎಂದು ಅವರು ಹೇಳಿದರು.
ಬ್ಯಾಂಕ್‍ನ ಪ್ರಾದೇಶಿಕ ಮುಖ್ಯಸ್ಥ ರೋಡ್ರಿಗಸ್ ರೊಸಲೀನ್ ಟ್ರೆಸಾ ಮಾತನಾಡಿ, ಯೂನಿಯನ್ ಬ್ಯಾಂಕ್‍ನ ಉತ್ತಮ ಗ್ರಾಹಕರು ಬ್ಯಾಂಕ್‍ನ ಬೆಳವಣಿಗೆಗೆ ಇಷ್ಟು ದಿನ ಸಹಾಯ ಮಾಡಿದ್ದಾರೆ. ಗ್ರಾಹಕರ ಎಲ್ಲಾ ಸೇವೆಗಳಿಗೆ ಬ್ಯಾಂಕ್ ಬೆಂಬಲ ನೀಡಲಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಅಬ್ಬಾಸ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ನೀಲೇಶ್ ಕುಮಾರ್ ನೀಲೇಶ್ವರ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಅನ್ಹು ಜಯನ್ ವಂದಿಸಿದರು. ಬ್ಯಾಂಕಿನ ವಿವಿಧ ಗ್ರಾಹಕರು ತಮ್ಮ ಉತ್ತಮ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಎಲ್ಲಾ ಶಾಖೆಯ ನೌಕರರು ಭಾಗವಹಿಸಿದ್ದರು.