ಕಾಸರಗೋಡು: ಆಜಾದಿಕಿ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಅಮೃತ ಸರೋವರ ಯೋಜನೆಯನ್ವಯ ನವೀಕರಣಗೊಳ್ಳುತ್ತಿರುವ ಮಡಿಕೈ ಪಮಚಾಯಿತಿಯ ಕರುವಲಪ್ ಪಾಲಂ ಪ್ರದೇಶಕ್ಕೆ ರಾಜ್ಯ ನಿಗಾ ತಂಡ ಭೇಟಿ ನೀಡಿ ಕಾಮಗಾರಿಗಳ ಪರಾಮರ್ಶೆ ನಡೆಸಿತು.
ಈ ಸಂದರ್ಭ ಸರೋವರದ ಕಾಮಗಾರಿಗಳ ಬಗ್ಗೆ ರಾಜ್ಯ ಗುಣಮಟ್ಟ ನಿಯಂತ್ರಕರು ಮೌಲ್ಯಮಾಪನ ನಡೆಸಿದರು. ಜಿಲ್ಲಾ ಉಸ್ತುವಾರಿ ತಂಡವು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಅಮೃತ್ ಸರೋವರ ಯೋಜನೆಯ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿತು. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಜಿಲ್ಲೆಯ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಅಮೃತ್ ಸರೋವರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.