ನೀವು ಗರ್ಭಿಣಿಯಾಗಿದ್ದರೆ ಮಗುವಿನ ಹೊಕ್ಕಳ ಬಳ್ಳಿ ಸಂಗ್ರಹಿಸಿಡುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು, ಇದರಿಂದ ತುಂಬಾನೇ ಪ್ರಯೋಜನವಿದೆ. ಹೆಚ್ಚಿನವರು ಹೊಕ್ಕಳ ಬಳ್ಳಿ ಒಣಗಿದ ಮೇಲೆ ಅದು ಬಿದ್ದು ಹೋಗುತ್ತದೆ ಅದನ್ನು ಬಿಸಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗೆ ಜೀವ ರಕ್ಷಕವಾಗುವುದು ಈ ಹೊಕ್ಕಳ ಬಳ್ಳಿ. ಆದ್ದರಿಂದ ಸಂಗ್ರಹಿಸಿಡುವುದು ಒಳ್ಳೆಯದು. ಇದರ ಕುರಿತು ಹೆಚ್ಚಿನ ವಿವರ ನೋಡುವುದಾದರೆ
ಹೊಕ್ಕಳ ಬಳ್ಳಿ ಬ್ಯಾಂಕಿಂಗ್ ಕುರಿತು ಹೇಳುವುದಾದರೆ
ಹೊಕ್ಕಳ ಬಳ್ಳಿ ಬ್ಯಾಂಕಿಂಗ್‌ನಲ್ಲಿ ಸಂಗ್ರಹಿಸಿಡುವುದರಿಂದ ಕ್ಯಾನ್ಸರ್, ರೋಗನಿರೋಧ ಶಕ್ತಿ ಕಡಿಮೆ ಇರುವುದು ಹಾಗೂ ವಂಶವಾಹಿಯಾಗಿ ಬರುವ ಕೆಲವೊಂದು ಕಾಯಿಲೆಯನ್ನು ತಡೆಗಟ್ಟಲು ತುಂಬಾನೇ ಪ್ರಯೋಜನಕಾರಿಯಾಗಿದೆ. ಲುಕೆಮಿಯಾ, ತಲಾಸ್ಸೆಮಿಯಾ ಮುಂತಾದ ಕಾಯಿಲೆಯಿಂದ ವ್ಯಕ್ತಿಯನ್ನು ರಕ್ಷಣೆ ಮಾಡಲು ಹೊಕ್ಕಳ ಬಳ್ಳಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮಗು ಹುಟ್ಟಿದ ಕೂಡಲೇ ಹೊಕ್ಕಳ ಬಳ್ಳಿಯನ್ನು ಅದಕ್ಕಾಗಿಯೇ ಇರುವ ಬ್ಯಾಂಕಿಂಗ್‌ನಲ್ಲಿ ಸಂಗ್ರಹಿಸಿಡುವುದರಿಂದ ಭವಿಷ್ಯದಲ್ಲಿ ಅವಶ್ಯಕ ಬಿದ್ದಾಗ ತುಂಬಾನೇ ಪ್ರಯೋಜನಕಾರಿಯಾಗಿದೆ.
ವಿಶ್ವದಲ್ಲಿ hematopoietic ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್‌ಗೆ ತುಂಬಾನೇ ಬೇಡಿಕೆ ಇದೆ, ಪ್ರತಿವರ್ಷ ಸುಮಾರು 90, 000 ರೋಗಿಗಳಿಗೆ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆ ನೀಡಲಾಗುತ್ತಿದೆ, ಹೊಕ್ಕಳ ಬಳ್ಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಕ್ಯಾನ್ಸರ್ ಕಾಯಿಲೆ ಬಂದರೆ ಅವರ ಜೀವ ರಕ್ಷಣೆಗೆ ಈ ಹೊಕ್ಕಳ ಬಳ್ಳಿ ಸಹಕಾರಿಯಾಗಿದೆ. ಹೊಕ್ಕಳ ಬಳ್ಳಿ ದಾನಿಗಳು ತುಂಬಾ ಕಡಿಮೆ, ಒಂದು ವೇಳೆ ಸಿಕ್ಕರೂ ಮ್ಯಾಚ್ ಹೊಂದುವುದು ಕಡಿಮೆ, ಆದ್ದರಿಂದ ಅವರದ್ದೇ ಹೊಕ್ಕಳಬಳ್ಳಿ ಸಂಗ್ರಹಿಸಿಟ್ಟರೆ ಭವಿಷ್ಯದಲ್ಲಿ ಏನಾದರೂ ಅಪಾಯ ಉಂಟಾದರೆ ಉಪಕಾರಿಯಾದೀತು.
ಹೊಕ್ಕಳ ಬಳ್ಳಿಯನ್ನು ಬ್ಯಾಂಕಿಂಗ್ ಮಾಡುವುದರಿಂದ ದೊರೆಯುವ ಪ್ರಯೋಜನಗಗಳು
1. ಹೊಕ್ಕಳ ಬಳ್ಳಿ ರಕ್ತವನ್ನು ಮಗು ಜನಿಸಿದ ಕೂಡಲೇ ಸಂಗ್ರಹಿಸಿ ನಂತರ ಸಂಗ್ರಹಿಸಿ ಇಡಲಾಗುವುದು. ಇದನ್ನು ಕುಟುಂಬದಲ್ಲಿ ಯಾರಿಗಾದರೂ ಸಮಸ್ಯೆಯಾದಗಲೂ ಬಳಸಿಕೊಳ್ಳಬಹುದು. ಏಕೆಂದರೆ ಮ್ಯಾಚ್ ಆಗುವ ಸಾಧ್ಯತೆ ಹೆಚ್ಚು.
2. ಮ್ಯಾಚ್ ಹುಡುಕುವುದು ಕಷ್ಟವಾಗಲ್ಲ: ಹೊಕ್ಕಳ ಬಳ್ಳಿ ರಕ್ತವನ್ನು ಸಂಗ್ರಹಿಸಿಡುವುದರಿಂದ ಅಗ್ಯತಬಿದ್ದಾಗ ಸುಲಭದಲ್ಲಿ ಬಳಸಿಕೊಳ್ಳಬಹುದು. ದಾನಿಗಳನ್ನು ಹುಡುಕಿದರೆ ಸಿಗುವುದು ತುಂಬಾನೇ ಕಷ್ಟ. ಸಾವಿನ ಸಂಖ್ಯೆ ಕುಗ್ಗಿಸುತ್ತದೆ: ಅಸ್ಥಿ ಮಜ್ಜೆ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಯಲ್ಲಿ ಇದು ಸಹಾಯವಾಗುವುದು. ಇದರಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಾಗುವುದು.