ದೇಶದ ಬಹುತೇಕ ಕಡೆಗಳಲ್ಲಿ ಚಂಡಾಮಾರುತ ಅಪ್ಪಳಿಸುತ್ತಿದೆ, ಚಂಡಾಮಾರುತದಿಂದಾಗ ಹಲವು ಕಡೆ ಮಳೆ ತುಂಬಾನೇ ಸುರಿಯುತ್ತಿದೆ. ಮಾನ್ಸೂನ್ ಶುರುವಾಗಿದೆ, ಅದರ ಜೊತೆ ಚಂಡಾಮಾರುತದ ಅಬ್ಬರ ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಕಾಯಿಲೆ ಬೀಳುವುದನ್ನು ತಡೆಗಟ್ಟಲು ನೀವು ರೋಗ ನಿರೋಧಕ ಪಾನೀಯ ಸೇವಿಸುವುದು ಒಳ್ಳೆಯದು:
1. ಶುಂಠಿ, ನಿಂಬೆಹಣ್ಣು, ಜೇನು
ಈ ಮೂರು ವಸ್ತುಗಳ ಕಾಂಬಿನೇಷನ್‌ನ ಪಾನೀಯ ಮಳೆಗಾಲಕ್ಕೆ ತುಂಬಾನೇ ಒಳ್ಳೆಯದು. ಬಿಸಿ ನೀರಿಗೆ ಸ್ವಲ್ಪ ಒಣಶುಂಠಿ ಪುಡಿ, ಜೇನು ಹಾಕಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ಸಾಮಾನ್ಯ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ದೂರಾಗುವುದು. ಶುಂಠಿಯಲ್ಲಿ antioxidants ಹಾಗೂ ಬ್ಯಾಕ್ಟಿರಿಯಾಗಳನ್ನು ತಡೆಗಟ್ಟುವ ಸಾಮರ್ಥ್ಯ ಇದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದ್ದು ಜೇನು ಗಂಟಲು ಕೆರೆತ ಕಡಿಮೆ ಮಾಡಿ ಕೆಮ್ಮು ತಡೆಗಟ್ಟುತ್ತದೆ. ಈ ಪಾನೀಯ ಕುಡಿಯುವುದಾದರೆ ದಿನದಲ್ಲಿ ಒಂದು ಲೋಟ ಕುಡಿಯಿರಿ. ಇದಕ್ಕೆ ಬೇಕಿದ್ದರೆ ಸ್ವಲ್ಪ ತುಳಸಿ ಸೇರಿಸಬಹುದು.
ಕೆಮ್ಮು-ಶೀತವಿದ್ದರೆ ಈ ಕಷಾಯ ಮಾಡಿ ಕುಡಿಯಿರಿ
* ಕೊತ್ತಂಬರಿ, ಜೀರಿಗೆ, ಸೋಂಪು ಇವುಗಳನ್ನು 4:2:1 ಪ್ರಮಾಣದಲ್ಲಿ ತೆಗೆದುಕೊಳ್ಳಿ, ಅದಕ್ಕೆ ಒಂದು ಚಮಚ ಕಾಳು ಮೆಣಸು ಹಾಕಿ.
* ಈಗ ಇವೆಲ್ಲವನ್ನೂ ರುಬ್ಬಿ ಪೌಡರ್ ರೀತಿ ಮಾಡಿ.
* ಈಗ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಕಷಾಯ ಪುಡಿ ಬೆರೆಸಿ ಕುಡಿಯಿರಿ. ಇದನ್ನು ಎರಡು ಹೊತ್ತು ತೆಗೆದುಕೊಳ್ಳುವುದರಿಂದ ತುಂಬಾನೇ ರಿಲೀಫ್ ಸಿಗುವುದು.
ಚಕ್ಕೆ ಮತ್ತು ನಿಂಬೆರಸ
ಒಂದು ಲೋಟ ನೀರಿಗೆ ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ ತುಂಡು ಹಾಕಿ ಕಾಯಿಸಿ. ನಂತರ ನೀರನ್ನು ಒಂದು ರಾತ್ರಿ ಇಟ್ಟು ಬೆಳಗ್ಗೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ. ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಆಗಾಗ ಕಾಯಿಲೆ ಬೀಳುವುದು ತಡೆಗಟ್ಟಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾನಿಕ್
ಒಂದು ಲೋಟಕ್ಕೆ ಸ್ವಲ್ಪ ಆಪಲ್ ಸಿಡರ್ ವಿನೆಗರ್ ಸೇರಿಸಿ, ನಂತರ ಅದಕ್ಕೆ ಸ್ವಲ್ಪ ಚಕ್ಕೆ ಪುಡಿ ಹಾಕಿ, ಬಿಸಿ ನೀರು ಹಾಕಿ ಮಿಕ್ಸ್ ಮಾಡಿ. ಇದನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.