ಕಾಸರಗೋಡು: ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆಮಾಡಿ, ಭೂಮಿಯನ್ನು ಪ್ಲಾಸ್ಟಿಕ್ ಪದರದಿಂದ ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಧೂರು ಗ್ರಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ತಿಳಿಸಿದ್ದಾರೆ. ಅವರು ಮಧೂರು ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಬಡ್ಸ್ ಲೈವ್ಲಿ ಹುಡ್ ಪೇಪರ್ ಬ್ಯಾಗ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಿಡಿಎಸ್ ಅಧ್ಯಕ್ಷೆ ಸುಮಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾವಿನೋದ್, ಪಂಚಾಯತ್ ಕಾರ್ಯದರ್ಶಿ ಜ್ಯೋತಿಶ್, ಜಿಲ್ಲಾ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕ ಲಿಜಿನ್, ಪಂಚಾಯಿತಿ ಆಡಳಿತ ಸಮಿತಿಯ ಸದಸ್ಯರು, ತರಬೇತುದಾರರು, ಬ್ಲಾಕ್ ಸಂಯೋಜಕರು, ಶಿಕ್ಷಕರು, ಸಿಡಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಿಪಿ ರೆಡಿಮೇಡ್ಸ್ ಏಂಡ್ ಫ್ಯಾನ್ಸಿಗೆ ಘಟಕದ ಪೇಪರ್ ಬ್ಯಾಗ್‍ನ ಮೊದಲ ಮಾರಾಟ ನಡೆಸಲಾಯಿತು. ಸದಸ್ಯ ಕಾರ್ಯದರ್ಶಿ ಪೀತಾಂಬರನ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಉಪಾಧ್ಯಕ್ಷೆ ಶ್ರೀಲತಾ ವಂದಿಸಿದರು.