ಅಹಮದಾಬಾದ್ : ಬಹುನಿರೀಕ್ಷಿತ, ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನದ ಮೊದಲ ಹಂತ ಮಿಷನ್ ಅನ್ನು ಆಗಸ್ಟ್ ಮಾಸಾಂತ್ಯದಲ್ಲಿ ಕಾರ್ಯಗತಗೊಳಿಸಲಿದೆ.
ಮಾನವರಹಿತ ಮಿಷನ್ ಮುಂದಿನ ವರ್ಷ ನಡೆಯಲಿದೆ.
ಗುರುವಾರ ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಗಗನಯಾನಕ್ಕೆ ಮೊದಲಿಗೆ ಪ್ರಾಯೋಗಿಕ ಮಿಷನ್ ಕಾರ್ಯಗತಗೊಳಿಸಬೇಕು. ಇದಕ್ಕಾಗಿ ಪರೀಕ್ಷಾರ್ಥ ಉಡಾವಣೆಗೆ ಶ್ರೀಹರಿಕೋಟಾದಲ್ಲಿ ಹೊಸ ರಾಕೆಟ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಪರೀಕ್ಷೆಗಾಗಿ ಈ ತಿಂಗಳ ಅಂತ್ಯಕ್ಕೆ ಸಜ್ಜಾಗಲಿದೆ ಎಂಬ ಮಾಹಿತಿ ಇದೆ. ಬಹುತೇಕ ಆಗಸ್ಟ್ ಅಂತ್ಯದ ವೇಳೆಗೆ ಮೊದಲ ಹಂತದ ಮಿಷನ್ ಕಾರ್ಯಗತಗೊಳ್ಳಲಿದೆ. ಭಿನ್ನ ವಾತಾವರಣದಲ್ಲಿ ನಂತರ ಪರೀಕ್ಷಾರ್ಥ ಪ್ರಯೋಗವು ಪುನರಾವರ್ತನೆಗೊಳ್ಳಲಿದೆ ಎಂದರು.
ಮುಂದಿನ ವರ್ಷ ಮಾನವರಹಿತ ಮಿಷನ್ ನಡೆಯಲಿದೆ. ಬಳಿಕ ಅದನ್ನು ಕಕ್ಷೆಯಿಂದ ಸುರಕ್ಷಿತವಾಗಿ ಮರಳಿ ಕರೆತರುವ ಮೂರನೇ ಹಂತದ ಮಿಷನ್ ನಡೆಯಲಿದೆ. ಪ್ರಸ್ತುತ ಮೂರು ಹಂತದ ಮಿಷನ್ ಕಾರ್ಯಯೋಜನೆಗೆ ಯೋಜನೆ ಸಿದ್ಧವಾಗಿದೆ ಎಂದರು.
ಮಾನವಸಹಿತ ಗಗನಯಾನ ಇದಾದುರಿಂದ ಸಿಬ್ಬಂದಿಯ ಸುರಕ್ಷತೆಯೇ ಈ ಯೋಜನೆಯಲ್ಲಿ ಸವಾಲಿನ ಕೆಲಸವಾಗಿದೆ. ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಸ್ರೊ ಅಧ್ಯಕ್ಷರು ಇಲ್ಲಿನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ (ಪಿಆರ್‌ಎಲ್) 'ಪರಂ ವಿಕ್ರಂ-1000' ಹೆಸರಿನ ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯವನ್ನು ಉದ್ಘಾಟಿಸಿದರು.
ಈ ಸೂಪರ್ ಕಂಪ್ಯೂಟರ್ ಈ ಹಿಂದಿನ, ಪ್ರಸ್ತುತ ಬಳಕೆಯಲ್ಲಿರುವ 'ವಿಕ್ರಂ-100' ಕಂಪ್ಯೂಟರ್‌ಗಿಂತಲೂ ಶೇ 10 ರಷ್ಟು ಹೆಚ್ಚು ಸಾಮರ್ಥ್ಯದ್ದಾಗಿದೆ ಎಂದು ತಿಳಿಸಿದರು.