ಕಾಸರಗೋಡು: ಅಸೌಖ್ಯಪೀಡಿತ ಕೂಡ್ಲು ಗಂಗೆ ನಿವಾಸಿ ಸುಧಾಕರ ರೈ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಕಾಸರಗೋಡು-ಮಧೂರು ರೂಟಲ್ಲಿ ಸಂಚಾರ ನಡೆಸುತ್ತಿರುವ ಶ್ರೀಗಣೇಶ್ ಬಸ್ ಒಂದು ಒಂದು ದಿನದ ಸಂಚಾರವನ್ನು 'ಕಾರುಣ್ಯ ಯಾತ್ರೆ' ಹೆಸರಲ್ಲಿ ನಡೆಸಿತು.
ಮೆದುಳು ಸಂಬಂಧಿ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಧಾಕರ ರೈ ಅವಗೆ ಚಿಕಿತ್ಸಾ ನೆರವು ಒದಗಿಸುವ ನಿಟ್ಟಿನಲ್ಲಿ ಕಾರುಣ್ಯ ಯಾತ್ರೆ ಆಯೋಜಿಸಲಾಯಿತು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಮಧೂರು ಗ್ರಾಮ ಪಂಚಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅವರು ಚಿಕಿತ್ಸಾ ನಿಧಿ ಸಮರ್ಪಿಸುವ ಮೂಲಕ ಉದ್ಘಾಟಿಸಿದರು. ಕಾಸಗಿ ಬಸ್ ಮಾಲಿಕರ ಸಂಘದ ಜಿಲ್ಲ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶುಕ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವೈಎಸ್ಪಿ ಪಿ.ಕೆ. ಸುಧಾಕರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ. ವಿಟಲ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಯಶೋಧ, ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರ ಕುದುರೆಪಾಡಿ, ಗ್ರಾಪಂ ಸದಸ್ಯೆ ಶ್ರೀಮತಿ ಟೀಚರ್, ಶ್ರೀ ಗಣೇಶ್ ಬಸ್ಸಿನ ಮಾಲಿಕ ಬಿ. ಸತೀಶ್, ಬಿ. ಪ್ರಕಾಶ್ ಉಪಸ್ಥಿತರಿದ್ದರು. ಮಹಾಬಲ ರೈ ಸ್ವಾಗತಿಸಿದರು. ಕಾಸರಗೋಡು-ಮಧೂರು ಮಾರ್ಗವಾಗಿ ಸಂಚರಿಸುವ ಶ್ರೀಗಣೇಶ್ ಬಸ್ಸಿನ ಒಂದು ದಿನದ ಆದಾಯವನ್ನು ಸುಧಾಕರ ರೈ ಅವರ ಚಿಕಿತ್ಸೆಗೆ ನೀಡಲು ಬಸ್ ಮಾಲಿಕರು ಮುಂದೆ ಬಂದಿದ್ದಾರೆ.