ಕಾಸರಗೋಡು: ಕಾಞಂಗಾಡ್ ಜಿಲ್ಲಾ ವೈದ್ಯಕೀಯ ಕಛೇರಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ'ನೀರಿನಿಂದ ಹರಡುವ ರೋಗಗಳು ಮತ್ತು ತಡೆಗಟ್ಟುವ ಕ್ರಮಗಳು' ಕಾರ್ಯಾಗಾರ ಆಯೋಜಿಸಲಾಗಿತ್ತು. ಜಿಲ್ಲಾ ವೈದ್ಯಕೀಯ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ನಡೆಸಲಾದ ಕಾರ್ಯಾಗಾರವನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಉದ್ಘಾಟಿಸಿದರು. ಜಿಲ್ಲಾ ಉಪ ವೈದ್ಯಾಧಿಕಾರಿ ಡಾ.ಗೀತಾ ಗುರುದಾಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಡಾ.ರಿಜಿತ್ ಕೃಷ್ಣನ್, ಪತ್ರಿಕಾ ವೇದಿಕೆ ಅಧ್ಯಕ್ಷ ಟಿ.ಕೆ.ನಾರಾಯಣನ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಬಿ.ಸಂತೋಷ್ ಉಪಸ್ಥಿತರಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠ ಸ್ವಾಗತಿಸಿದರು. ಉಪಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್.ಸಯನಾ ವಂದಿಸಿದರು. ಆದ್ರ್ರಮ್ ಮಿಷನ್ ಸಹಾಯಕ ನೋಡಲ್ ಅಧಿಕಾರಿ ಡಾ.ದಲ್ಮಿತಾ ನಿಯಾ ಜೇಮ್ಸ್ ಮತ್ತು ತಾಂತ್ರಿಕ ಸಹಾಯಕ ಎಂ.ವೇಣುಗೋಪಾಲನ್ ಅವರು ಜಲಮೂಲ ರೋಗಗಳ ಕುರಿತು ತರಗತಿ ನಡೆಸಿದರು.