ನವದೆಹಲಿ: ಈ ವರ್ಷ ಮಾನ್ಸೂನ್ ಸಮಯದಲ್ಲಿ ದೇಶದಲ್ಲಿ ಯಾವುದೇ ಕಲ್ಲಿದ್ದಲು ಕೊರತೆ ಎದುರಾಗುವುದಿಲ್ಲ ಎಂದು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಹೇಳಿದ್ದಾರೆ.
ಭೂಗತ ಕಲ್ಲಿದ್ದಲು ಗಣಿಗಾರಿಕೆ ಸಮಾವೇಶದಲ್ಲಿ ಮಾತನಾಡಿದ ಜೋಶಿ, ಕಲ್ಲಿದ್ದಲುಗಾಗಿ ಈ ವರ್ಷ ಏನೇ ಬೇಡಿಕೆ ಬಂದರೂ ಅದನ್ನು ಈಡೇರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಈ ಬಾರಿ ಮುಂಗಾರು ಮಳೆಯಲ್ಲೂ ಕಲ್ಲಿದ್ದಲು ಕೊರತೆಯಾಗುವುದಿಲ್ಲ ಎಂದು ಕೋಲ್ ಇಂಡಿಯಾ ಹಾಗೂ ಕಲ್ಲಿದ್ದಲು ಸಚಿವಾಲಯದ ಪರವಾಗಿ ದೇಶಕ್ಕೆ ಭರವಸೆ ನೀಡುತ್ತೇನೆ. ತಯಾರಿ ಉತ್ತಮವಾಗಿದ್ದು, ಈ ವರ್ಷದ ಸಂಪೂರ್ಣ ಬೇಡಿಕೆಯನ್ನು ಪೂರೈಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜೋಶಿ ಹೇಳಿದರು.
ಥರ್ಮಲ್ ಪವರ್ ಪ್ಲಾಂಟ್‌ಗಳಲ್ಲಿ 35 ಮಿಲಿಯನ್ ಟನ್(ಎಂಟಿ) ಕಲ್ಲಿದ್ದಲು ಇದ್ದರೆ, ಕೋಲ್ ಇಂಡಿಯಾ ಮತ್ತು ಖಾಸಗಿ ಗಣಿಗಾರರ ಪಿಟ್ ಹೆಡ್‌ಗಳಲ್ಲಿ 65 ಮೆಟ್ರಿಕ್ ಟನ್ ಮತ್ತು ಇನ್ನೂ 10-12 ಎಂಟಿ ವಿವಿಧ ಹಂತಗಳಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.