ನಾಗ್ಪುರ: 'ದೇಶದ ಗಡಿಯಲ್ಲಿರುವ ಶತ್ರುಗಳಿಗೆ ನಮ್ಮ ಶಕ್ತಿ ತೋರಿಸುವ ಬದಲು ನಮ್ಮ ನಮ್ಮಲ್ಲೇ ಕಾದಾಡುತ್ತಿದ್ದೇವೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್ ) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ವಿಷಾದಿಸಿದ್ದಾರೆ.
ನಾಗ್ಪುರ: 'ದೇಶದ ಗಡಿಯಲ್ಲಿರುವ ಶತ್ರುಗಳಿಗೆ ನಮ್ಮ ಶಕ್ತಿ ತೋರಿಸುವ ಬದಲು ನಮ್ಮ ನಮ್ಮಲ್ಲೇ ಕಾದಾಡುತ್ತಿದ್ದೇವೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್ ) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ವಿಷಾದಿಸಿದ್ದಾರೆ.
ಇಲ್ಲಿ ನಡೆದ 'ಸಂಘ ಶಿಕ್ಷಾ ವರ್ಗ್'ದ (ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅಧಿಕಾರಿಗಳ ತರಬೇತಿ ಶಿಬಿರ) ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಪ್ರತಿಯೊಬ್ಬ ನಾಗರಿಕ ದೇಶದ ಏಕತೆ ಮತ್ತು ಸಮಗ್ರತೆ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಸಮಾಜದಲ್ಲಿ ಧರ್ಮ ಮತ್ತು ಪಂಥಕ್ಕೆ ಸಂಬಂಧಿಸಿದ ಹಲವಾರು ಭಿನ್ನಾಭಿಪ್ರಾಯಗಳಿವೆ. ನಾವು ಒಂದೇ ದೇಶ ಎಂಬುದನ್ನು ಮರೆಯುತ್ತಿದ್ದೇವೆ ಎಂದರು.