ನವದೆಹಲಿ (PTI): ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹತ್ಯೆ ಮಾಡುವುದಾಗಿ ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಬುಧವಾರ ಎರಡು ಬಾರಿ ಕರೆ ಮಾಡಿ, ಬೆದರಿಕೆ ಹಾಕಿದ ಘಟನೆ ನಡೆದಿದೆ.

ಆರೋಪಿಯು ಬೆಳಿಗ್ಗೆ 10.46ಕ್ಕೆ ಮೊದಲ ಕರೆ ಮಾಡಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ₹10 ಕೋಟಿ ನೀಡದಿದ್ದರೆ ಅವರನ್ನು ಕೊಲ್ಲುವುದಾಗಿ ಮತ್ತು ಬೆಳಿಗ್ಗೆ 10.54ಕ್ಕೆ ಎರಡನೇ ಬಾರಿಗೆ ಕರೆ ಮಾಡಿ ₹2 ಕೋಟಿ ನೀಡದಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಡಿಸಿಪಿ ಹರೇಂದ್ರ ಸಿಂಗ್ ತಿಳಿಸಿದ್ದಾರೆ.
ಆರೋಪಿಯು ನಂಗಲೋಯಿ ಪ್ರದೇಶದಿಂದ ಕರೆ ಮಾಡಿದ್ದು, ಈತ ಮೇದಿಪುರದ ನಿವಾಸಿ ಸುಧೀರ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಬಂಧಿಸಲು ಪಶ್ಚಿಮ ವಿಹಾರ್ (ಪೂರ್ವ) ಪೊಲೀಸ್ ಠಾಣೆಯ ಎಸ್‌ಎಚ್‌ಒ ಮತ್ತು ಇತರ ನಾಲ್ವರು ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
'ಆರೋಪಿಯ ಮನೆಗೆ ಪೊಲೀಸರು ಹೋಗಿ ವಿಚಾರಿಸಿದಾಗ ಆತ ಮನೆಯಲ್ಲಿ ಇರಲಿಲ್ಲ. ಆತನ ಮಗ ಅಂಕಿತ್ ಎಂಬುವವರನ್ನು ವಿಚಾರಿಸಿದಾಗ, 'ನನ್ನ ತಂದೆ ಒಬ್ಬ ಬಡಗಿ, ಮದ್ಯವ್ಯಸನಿ. ಬೆಳಿಗ್ಗೆಯಿಂದಲೇ ಮದ್ಯಪಾನ ಮಾಡುತ್ತಾರೆ' ಎಂಬ ಹೇಳಿಕೆಯನ್ನು ಮಗ ನೀಡಿದ್ದಾರೆ. ಆರೋಪಿಗೆ ಮಗನಿಂದ ಮೊಬೈಲ್ ಕರೆ ಮಾಡಿಸಿ ಮಾತನಾಡಿಸಿದಾಗ ಆರೋಪಿ ಬಹಳ ಸುಸಂಬದ್ಧವಾಗಿಯೇ ಉತ್ತರಿಸಿದ್ದಾನೆ. ಆರೋಪಿ ಬಂಧಿಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ' ಎಂದು ಡಿಸಿಪಿ ತಿಳಿಸಿದ್ದಾರೆ.