ಕಾಸರಗೋಡು : ವಿಶ್ವ ರಕ್ತದಾನ ದಿನದ ಅಂಗವಾಗಿ, ಜಿಲ್ಲಾ ವೈದ್ಯಕೀಯ ಕಛೇರಿ, ಕಾಞಂಗಾಡ್ ಬ್ಲಡ್ ಬ್ಯಾಂಕ್, ನೀಲೇಶ್ವರ ಜನ ಮೈತ್ರಿ ಪೆÇಲೀಸ್, gಬ್ಲಡ್ ಡೋನರ್ಸ್ ಕೇರಳ ಮತ್ತು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಸಹಯೋಗದೊಂದಿಗೆ ರಕ್ತದನ ಶಿಬಿರ ನೀಲೇಶ್ವರ ವ್ಯಾಪಾರಿ ಭವನ ಸಭಾಂಗಣದಲ್ಲಿ ಜರುಗಿತು.
ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ಶಿಬಿರ ಉದ್ಘಾಟಿಸಿದರು. ನೀಲೇಶ್ವರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಆಶಯ ಭಾಷಣ ಮಾಡಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಕೆ.ವಿ.ಪ್ರಕಾಶ್, ನೀಲೇಶ್ವರಂ ತಾಲೂಕು ಆಸ್ಪತ್ರೆ ಅಧೀಕ್ಷಕ ಡಾ.ಎ.ಟಿ.ಮನೋಜ್, ಕಾಞಂಗಾಡ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ನಿಮ್ಮಿ ಜಾನ್, ಬ್ಲಡ್ ಡೋನರ್ಸ್ ಕೇರಳ ರಾಜ್ಯ ಉಪಾಧ್ಯಕ್ಷ ಜೆ.ಸನಲ್ಲಾಲ್, ಕೆಪಿಎ ಜಿಲ್ಲಾ ಜತೆ ಕಾರ್ಯದರ್ಶಿ ಟಿ.ವಿ.ಪ್ರಮೋದ್, ಜನಮೈತ್ರಿ ಬೀಟ್ ಅಧಿಕಾರಿ ಎಂ.ಶೈಲಜಾ ಉಪಸ್ಥಿತರಿದ್ದರು.
ವ್ಯಾಪಾರಿಗಳು ಮತ್ತು ಉದ್ಯಮಿಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ವಿನೋದ್ ಕುಮಾರ್ ಸ್ವಾಗತಿಸಿದರು. ಜನಮೈತ್ರಿ ಬೀಟ್ ಅಧಿಕಾರಿ ಪ್ರದೀಪನ್ ಕೊತ್ತೋಳಿ ವಂದಿಸಿದರು. ಶಿಬಿರದಲ್ಲಿ 47 ಮಂದಿ ರಕ್ತದಾನ ಮಾಡಿದರು. 'ರಕ್ತದಾನ ಮಾಡಿ, ಪ್ಲಾಸ್ಮಾ ದಾನ ಮಾಡಿ, ಜೀವನವನ್ನು ನಿಯಮಿತವಾಗಿ ಹಂಚಿಕೊಳ್ಳಿ' ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಆರೋಗ್ಯವಾಗಿರುವ 18ರಿಂದ 65ರ ನಡುವಿನ 45ರಿಂದ 50ಕಿಲೋ ತೂಕವುಳ್ಳವರಿಗೆ ರಕ್ತದಾನ ಮಾಡಬಹುದಾಗಿದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವು ಶೇ.12.5 ಕ್ಕಿಂತ ಕಡಿಮೆಯಾಗಬಾರದು. ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ.