ನವದೆಹಲಿ: ಅಣ್ವಸ್ತ್ರಸಜ್ಜಿತ ದೇಶಗಳು ಅಣ್ವಸ್ತ್ರ ಆಧಾರಿತ ಶಸ್ತ್ರಾಸ್ತ್ರಗಳ ಆಧುನೀಕರಣ ಕಾರ್ಯವನ್ನು ನಿರಂತರವಾಗಿ ಕೈಗೊಂಡಿವೆ ಎಂದು ಸ್ವೀಡಿಶ್‌ನ ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್‌ಐಪಿಆರ್‌ಐ) ತಿಳಿಸಿದೆ.
ನವದೆಹಲಿ: ಅಣ್ವಸ್ತ್ರಸಜ್ಜಿತ ದೇಶಗಳು ಅಣ್ವಸ್ತ್ರ ಆಧಾರಿತ ಶಸ್ತ್ರಾಸ್ತ್ರಗಳ ಆಧುನೀಕರಣ ಕಾರ್ಯವನ್ನು ನಿರಂತರವಾಗಿ ಕೈಗೊಂಡಿವೆ ಎಂದು ಸ್ವೀಡಿಶ್‌ನ ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್‌ಐಪಿಆರ್‌ಐ) ತಿಳಿಸಿದೆ.
ಭಾರತ, ಅಮೆರಿಕ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ಪಾಕಿಸ್ತಾನ ರಾಷ್ಟ್ರಗಳು 2022ರಲ್ಲಿ ಅಣ್ವಸ್ತ್ರಸಜ್ಜಿತ ಅಥವಾ ಅಣ್ವಸ್ತ್ರ ಸಾಮರ್ಥ್ಯದ ಹೊಸ ಶಸ್ತ್ರಾಸ್ತ್ರಗಳನ್ನು ಸೇರ್ಪಡೆಗೊಳಿಸಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಚೀನಾ ಕಳೆದ ಒಂದು ವರ್ಷದಲ್ಲಿ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಚೀನಾದ ಬಳಿ 2022ರ ಜನವರಿಯಲ್ಲಿ 350 ಸಿಡಿತಲೆಗಳಿದ್ದರೆ, ಆ ಸಂಖ್ಯೆ 2023ರ ಜನವರಿಯಲ್ಲಿ 410ಕ್ಕೆ ಏರಿದೆ ಎಂದು ತಿಳಿಸಿದೆ.
ತನ್ನ ಸೇನಾಪಡೆಯನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದನ್ನು ಗಮನಿಸಿದರೆ ಚೀನಾವು ಗರಿಷ್ಠ ಸಂಖ್ಯೆಯಲ್ಲಿ ಖಂಡಾಂತರ ಕ್ಷಿಪಣಿ ಒಳಗೊಂಡಿದೆ. ದಶಕದ ಅಂತ್ಯದೊಳಗೆ ಅಮೆರಿಕ ಮತ್ತು ರಷ್ಯಾ ಇಷ್ಟು ಪ್ರಮಾಣದ ಕ್ಷಿಪಣಿ ಹೊಂದಬಹುದು ಎಂದು ಅಂದಾಜಿಸಿದೆ.
ಭಾರತ, ಪಾಕಿಸ್ತಾನ ತನ್ನ ಅಣ್ವಸ್ತ್ರಸಜ್ಜಿತ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಹೆಚ್ಚಿಸುತ್ತಿದೆ. 2022ರಲ್ಲಿ ಹೊಸ ಮಾದರಿ ಶಸ್ತ್ರಾಸ್ತ್ರಗಳನ್ನು ಸೇನೆಗೆ ಪರಿಚಯಿಸಿದೆ. ಅಲ್ಲದೆ ಚೀನಾ ಕೂಡ ಗಣನೀಯವಾಗಿ ಹೆಚ್ಚಿಸಿದೆ ಎಂದು ಎಸ್‌ಐಪಿಆರ್‌ಐನ ಹನ್ಸ್ ಎಂ.ಕ್ರಿಸ್ಟೀನ್ ಹೇಳಿದರು.
ಜಾಗತಿಕವಾಗಿ ಜನವರಿ 2023ರಲ್ಲಿ ಇದ್ದಂತೆ ಒಟ್ಟಾರೆ 12,512 ಅಣ್ವಸ್ತ್ರ ಸಿಡಿತಲೆಗಳಿವೆ. ಈ ಪೈಕಿ 9,576 ಸಂಭವನೀಯ ಬಳಕೆಗೆ ಸೇನೆಗಳ ಸುಪರ್ದಿಯಲ್ಲಿವೆ. ಜನವರಿ 22ಕ್ಕೆ ಹೋಲಿಸಿದರೆ 86 ಸಿಡಿತಲೆಗಳು ಹೆಚ್ಚಾಗಿವೆ ಎಂದು ತಿಳಿಸಿದರು.