ಮುಳ್ಳೇರಿಯ : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಕೊರತಿಮೂಲೆ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ 2023ನೇ ಸಾಲಿನ 'ಶಿವಗಿರಿ ಸಾಹಿತ್ಯ ಸ್ಪರ್ಧೆ'ಯನ್ನು ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಕವನ ಸ್ಪರ್ಧೆಗೆ ಮುಕ್ತ ಅವಕಾಶವಿದ್ದು, ಆಸಕ್ತ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಕವನ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಒಬ್ಬ ಸ್ಪರ್ಧಿ ಎಲ್ಲೂ ಪ್ರಕಟವಾಗದ ಒಂದು ಸ್ವರಚಿತ ಕವನವನ್ನು ಮಾತ್ರ ಕಳುಹಿಸಬೇಕು. ಸ್ಪರ್ಧಿಯ ಸಂಕ್ಷಿಪ್ತ ಪರಿಚಯ, ಒಂದು ಭಾವಚಿತ್ರ ಹಾಗೂ ಸಂಪರ್ಕ ಸಂಖ್ಯೆ ಸಹಿತ ಪೂರ್ಣ ವಿಳಾಸವನ್ನು ಪ್ರತ್ಯೇಕವಾಗಿ ಲಗತ್ತಿಸಿರಬೇಕು. ಸಂಘಟಕರ ತೀರ್ಮಾನವೇ ಅಂತಿಮ. ಆಸಕ್ತರು ತಮ್ಮ ಸ್ವರಚಿತ ಕವನವನ್ನು ಅಂಚೆಯ ಮೂಲಕ, ವಿರಾಜ್ ಅಡೂರು, ಕೃಷ್ಣನಿವಾಸ ಮನೆ, ಅಡೂರು ಗ್ರಾಮ, ಉರುಡೂರು ಅಂಚೆ, ಕಾಸರಗೋಡು - 671543 ವಿಳಾಸಕ್ಕೆ ಇದೇ ಜೂನ್ 25 ರ ಮೊದಲು ತಲುಪುವಂತೆ ಕಳುಹಿಸಲು ಪ್ರಕಟಣೆ ತಿಳಿಸಿದೆ.