ಮನ್ನಾಕ್ರ್ಕಾಡ್: ನಕಲಿ ಪ್ರಮಾಣಪತ್ರ ಪ್ರಕರಣದ ಆರೋಪಿ ವಿದ್ಯಾಳನ್ನು ಅಗಳಿ ಪೋಲೀಸ್ ಠಾಣೆಯಿಂದ ಮನ್ನಾಕ್ರ್ಕಾಡ್ ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಭಾರೀ ಪೆÇಲೀಸ್ ಬಂದೋಬಸ್ತ್‍ನೊಂದಿಗೆ ಕರೆತರಲಾಯಿತು.
ಬುಧವಾರ ಸಂಜೆ 5.30ಕ್ಕೆ ಕೋಝಿಕ್ಕೋಡ್‍ನ ಮೆಪಯ್ಯೂರಿನಲ್ಲಿ ಸಂಬಂಧಿಕರಾದ ವೃದ್ಧ ದಂಪತಿಯ ಮನೆಯಿಂದ ವಿದ್ಯಾಳನ್ನು ಬಂಧಿಸಲಾಗಿತ್ತು. ವಿದ್ಯಾ ತನ್ನ ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದಳು.
ಅಗಳಿ ಡಿವೈಎಸ್ಪಿ: ಎನ್. ಮುರಳೀಧರನ್ ಸೂಚನೆ ಮೇರೆಗೆ ಸಿಐ; ಕೆ. ಸಲೀಂ ಮತ್ತು ಎಸ್‍ಐ: ಜಯಪ್ರಸಾದ್ ತಂಡ ಸ್ನೇಹಿತನ ಮೊಬೈಲ್ ಹಿಂಬಾಲಿಸಿ ಸಾಹಸ ಮಾಡಿ ವಿದ್ಯಾಳನ್ನು ಹಿಡಿದಿದ್ದಾರೆ. ವಾರಗಟ್ಟಲೆ ವಿದ್ಯಾಗಾಗಿ ಹುಡುಕಾಟ ನಡೆಸಿದ್ದು, ಪೋನ್ ಸ್ವಿಚ್ ಆಫ್ ಮಾಡಿದ್ದರಿಂದ ತನಿಖೆ ಕಷ್ಟಕರವಾಗಿತ್ತು ಎಂದು ಡಿವೈಎಸ್ ಪಿ ತಿಳಿಸಿದ್ದಾರೆ. ಇದೇ ವೇಳೆ ವಿದ್ಯಾಗೆ ರಾಜಕೀಯ ಕೃಪಾಕಟಾಕ್ಷ ಸಿಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಮಧ್ಯೆ ಆಕೆ ಬೇರೆ ಬೇರೆ ಸ್ಥಳಗಳಲ್ಲಿ ವಾಸವಾಗಿದ್ದಳು ಎಂದು ವರದಿಯಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಗಳಿ ಠಾಣೆಯಿಂದ ಮನ್ನಾರ್ಕಟ್ ಗೆ ತರಲಾಗಿತ್ತು. ಸುಮಾರು ಒಂದು ಗಂಟೆಗೆ ಮನ್ನಾಕ್ರ್ಕಾಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆತರಲಾಯಿತು. 1.10ಕ್ಕೆ ಮ್ಯಾಜಿಸ್ಟ್ರೇಟ್ ಕಾವ್ಯಾ ಸೋಮನ್ ಮುಂದೆ ಹಾಜರುಪಡಿಸಲಾಯಿತು. ವಿದ್ಯಾ ಕರೆತರುತ್ತಿರುವುದನ್ನು ನೋಡಲು ಜನರು ನ್ಯಾಯಾಲಯದ ಮುಂದೆ ಜಮಾಯಿಸಿದ್ದರು. ಇದೇ ವೇಳೆ ಯುವ ಮೋರ್ಚಾ ಮತ್ತು ಯುವ ಕಾಂಗ್ರೆಸ್ ಪ್ರತಿತಂತ್ರಕ್ಕೆ ಮುಂದಾದವು. ಅಡ್ವ. ಸೆಬಾಸ್ಟಿಯನ್ ವಿದ್ಯಾ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೊಂದು ರಾಜಕೀಯ ಸೇಡು, ಪೋಲೀಸರು ಮಾಧ್ಯಮದವರ ಪರ ನಿಲ್ಲಲು ಯತ್ನಿಸುತ್ತಿದ್ದು, ವಿದ್ಯಾ ಅಮಾಯಕಿ ಎಂದು ವಾಗ್ದಾಳಿ ನಡೆಸಿದರು.
ಆದರೆ ನ್ಯಾಯಾಲಯ ಆರೋಪಿಗೆ 14 ದಿನಗಳ ರಿಮಾಂಡ್ ನೀಡಿದೆ.ವಿದ್ಯಾ ಪೋಲೀಸ್ ಕಸ್ಟಡಿಗೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿ ವಕೀಲರು ಈ ಮನವಿಯನ್ನು ವಿರೋಧಿಸಿದರೂ: ವಿ. ಅಬ್ದುಲ್ ವಹಾಬ್ ವಾದವನ್ನು ಒಪ್ಪಿಕೊಂಡು ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಆರೋಪಿಯನ್ನು ಅಟ್ಟಪಾಡಿಗೆ ಕರೆದೊಯ್ಯಲಾಯಿತು. ನಾಳೆ ಮಧ್ಯಾಹ್ನ ವಿದ್ಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಜಾಮೀನು ಅರ್ಜಿಯನ್ನು ಪರಿಗಣಿಸಲಾಗುವುದು. ಮನ್ನಾಕ್ರ್ಕಾಡ್ ಡಿವೈಎಸ್ಪಿ: ವಿ.ಎ. ಕೃಷ್ಣದಾಸ್, ಸಿಐ: ಬೋಬಿನ್ ಮ್ಯಾಥ್ಯೂ, ಎಸ್.ಐ ವಿ. ವಿವೇಕ್ ಸೇರಿದಂತೆ ಪೋಲೀಸ್ ತಂಡ ನ್ಯಾಯಾಲಯದಲ್ಲಿ ಭದ್ರತೆ ಒದಗಿಸಿತ್ತು.