ಶ್ರೀನಗರದ: ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಶ್ರೀನಗರದ: ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ದೋದಾದಲ್ಲಿ ಶುಕ್ರವಾರ ರಾತ್ರಿ 9.50ರ ಸುಮಾರಿಗೆ ರಿಕ್ಟರ್ ಮಾಕಪದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಶುಕ್ರವಾರ ತಡರಾತ್ರಿ 2.16ರ ಸುಮಾರಿಗೆ ಲಡಾಖ್‌ನಲ್ಲಿ ಭೂಮಿ ಕಂಪಿಸಿದೆ. ಬಳಿಕ ಕತ್ರಾದಲ್ಲಿ ಶನಿವಾರ ನಸುಕಿನ ಜಾವ 3.50ಕ್ಕೆ 4.1 ತೀವ್ರತೆಯ ಭೂಕಂಪನವಾಗಿದೆ.
ದೋದಾದಲ್ಲಿ 18 ಕಿ.ಮೀ. ಮತ್ತು ಲಡಾಖ್‌ನ ಲೇಹ್‌ನಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.