ಕಾಸರಗೋಡು: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ)ಕಾಸರಗೋಡು ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಎನ್‍ಸಿಪಿಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಪರಿಚಾರಕರಿಗೆ ಉಚಿತ ಆಹಾರ ವಿತರಿಸಲಾಯಿತು.
ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕರೀಂ ಚಂದೇರ ಉಚಿತ ಆಹಾರ ವಿತರಣೆ ಉದ್ಘಾಟಿಸಿದರು. ಬ್ಲಾಕ್ ಸಮಿತಿ ಅಧ್ಯಕ್ಷ ಉಬೈದುಲ್ಲಾ ಕಡವತ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾದ ದೇವದಾಸ್, ರಾಜು ಕೊಯಾನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಾಮೋದರ ವಲ್ಲಿಕಾ, ಉದಿನೂರು ಸುಕುಮಾರನ್, ಎ.ಟಿ.ವಿಜಯನ್, ಜುಬೈರ್ ಪಡ್ಪು, ಸಿದ್ದೀಕ್ ಕೈಕಂಬ, ಮಂಜೇಶ್ವರ ಬ್ಲಾಕ್ ಸಮಿತಿ ಅಧ್ಯಕ್ಷ ಮಹ್ಮದ್ ಕೈಕಂಬ, ತೃಕರಿಪುರ ಬ್ಲಾಕ್ ಅಧ್ಯಕ್ಷ ನಾರಾಯಣನ್ ಮಾಸ್ಟರ್. ಖದೀಜಾಮೊಗ್ರಾಲ್.ಎನ್ ವೈಸಿ ಜಿಲ್ಲಾ ಉಪಾಧ್ಯಕ್ಷ ಶಾಫಿ ಸುಹ್ರಿ, ಎನ್‍ವೈಸಿ ಜಿಲ್ಲಾ ಕಾರ್ಯದರ್ಶಿ ರಾಹುಲ್, ಇಬ್ರಾಹಿಂ. ಮುಹಮ್ಮದ್ ಅನೆಬಾಗಿಲು, ಶಮೀರ್ ಅಣಂಗೂರು, ಶಫೀಕ್ ಸುಹ್ರಿ.ಅಬ್ಬಾಸ್ ಪಟ್ಲ' ಖಾಲಿದ್ ಮಲ್ಲಂ. ಫೌಜಿಯಾ, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ. ಶೈನಿ ಜೈಸನ್. ಇಂದಿರಾ. ಪವಿನ್ರಾಜ್.ರಾಜೇಶ್.ರಫೀಕ್ ಮೈಮೂನ್ ನಗರ.ಹಮೀದ್ ಪೆರಾಲ್.ಲೆತೀಫ್ ಮೊಗ್ರಾಲ್ ಉಪಸ್ಥಿತರಿದ್ದರು.
ಕಾಸರಗೋಡು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಹಮೀದ್ ಚೇರಂಗೈ ಸ್ವಾಗತಿಸಿದರು.