ಪ್ರತಿ ಕಾಲಕ್ಕೆ ತಕ್ಕಂತೆ ನಮ್ಮ ಉಡುಗ-ತೊಡುಗೆ ಜೀವನಶೈಲಿ ಬದಲಾದಂತೆ, ನಮ್ಮ ಮೇಕಪ್ ಕೂಡ ಬದಲಾಗುವುದು ಅನಿವಾರ್ಯ. ಒಂದೇ ರೀತಿಯ ಮೇಕಪ್ ಎಲ್ಲಾ ಕಾಲಕ್ಕೂ ಹೊಂದಿಕೊಳ್ಳೋದಿಲ್ಲ. ಕಾಲಕ್ಕೆ ತಕ್ಕಂತೆ ಮೇಕಪ್, ಮೇಕಪ್ ಉತ್ಪನ್ನಗಳು ಬದಲಾಗಬೇಕು. ಆಗಲೇ ಕಾಂತಿಯುತ ನೋಟ ಪಡೆಯಲು ಸಾಧ್ಯ.
ಅದೇ ರೀತಿ ಇನ್ನೇನು ಮೆತ್ತಗೆ ಮಳೆಗಾಲವು ಕಾಲಿಡುತ್ತಿದೆ. ಬಿಸಿಲಿನ ಬೇಗೆಯಿಂದ ತಂಪಿನ ಮಳೆಗಾಲಕ್ಕೆ ಕಾಲಿಡುತ್ತಿದ್ದೇವೆ. ಹಾಗಾಗಿ ಇದು ನಮ್ಮ ಮೇಕಪ್ ಶೈಲಿ ಬದಲಾಯಿಸುವ ಸಮಯ. ಮಳೆಗಾದದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಮೇಕಪ್ ಮಾಡಿಕೊಳ್ಳುವಾಗ ಹೆಚ್ಚು ಕಾಳಜಿ ಅಗತ್ಯವಿರುತ್ತದೆ. ಹಾಗಾದ್ರೆ ಮಳೆಗಾದಲ್ಲಿ ಮೇಕಪ್ ಹೇಗಿರಬೇಕು? ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ನೋಡೋಣ. ಮಳೆಗಾಲದಲ್ಲಿ ಮೇಕಪ್ ಮಾಡಲು ಕೆಲವು ಉತ್ತಮ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
ಮೇಕಪ್ ಲೈಟ್ ಆಗಿರಲಿ:
ನಿಮ್ಮ ತ್ವಚೆ ಮತ್ತು ಮೇಕ್ಅಪ್ ಸಮತೋಲನದಲ್ಲಿ ಇಟ್ಟುಕೊಳ್ಳಲು ಮಳೆಗಾಲದಲ್ಲಿ ಹಗುರವಾದ ಮೇಕಪ್ ಮಾಡಿಕೊಳ್ಳಿ. ಅಂದರೆ ಮೇಕಪ್ ಲೇಯರ್ ಕಡಿಮೆ ಮಾಡಿಕೊಳ್ಳಿ. ಹೆವಿ ಮೇಕಪ್ ಮಳೆಗಾಲಕ್ಕೆ ಸೂಕ್ತವಲ್ಲ. ಹೆಚ್ಚಿನ ಲೇಯರ್ನ ಮೇಕಪ್ ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತವೆ. ಇದರಿಂದ ನೀವು ಬೆವರಿದಾಗ ನಿಮ್ಮ ಮೇಕಪ್ ಕರಗಲು ಆರಂಭವಾಗುತ್ತದೆ. ಜೊತೆಗೆ ಲೈಟ್ ಮೇಕಪ್ ನಿಂದ ನಿಮ್ಮ ತ್ವಚೆಯ ರಂಧ್ರಗಳಿಗೆ ಉಸಿರಾಡಲು ಅವಕಾಶ ದೊರೆತು, ನಿಮ್ಮ ಮುಖ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಮಾಯಿಶ್ಚರೈಸರ್ & ಮ್ಯಾಟ್ ಪ್ರೈಮರ್ ಬಳಸಿ:
ಕಾಲ ಯಾವುದೇ ಇರಲಿ, ನಿಮ್ಮ ತ್ವಚೆಯನ್ನು ತೇವಾಂಶಭರಿತವಾಗಿರಿಸುವುದು ಅತೀ ಮುಖ್ಯ. ಆದ್ದರಿಂದ ನಿಮ್ಮ ಆಯ್ಕೆಯ ಹಾಗೂ ತ್ವಚೆಯನ್ನು ಹೆಚ್ಚು ಕಾಲ ತೇವಾಂಶಭರಿತವಾಗಿರಿಸುವ ಮಾಯಿಶ್ಚರೈಸರ್ ಬಳಸಿ. ಮಳೆಗಾಲದ ಆರ್ದ್ರ ವಾತಾವರಣವು ನಿಮ್ಮ ತ್ವಚೆಯನ್ನು ಒಣಗಿಸಬಹುದು. ಆದ್ದರಿಂದ ವಾಡರ್ ಬೇಸ್ ಆಗಿರುವ ಮಾಯಿಶ್ಚರೈಸರ್ ಬಳಸಿ, ಇದು ನಿಮ್ಮ ಫೌಂಡೇಶನ್ ಜೊತೆ ಚೆನ್ನಾಗಿ ಬೆರೆತುಕೊಳ್ಳುವುದು. ಜೊತೆಗೆ ಮಾಯಿಶ್ಚರೈಸರ್ ಹಚ್ಚಿದ ನಂತರ, ಉತ್ತಮ ಫಿನಿಶಿಂಗ್ಗೆ ಮ್ಯಾಟ್ ಪ್ರೈಮರ್ ಬಳಸಿ. ಇದು ಮೇಕಪ್ಗೆ ಒಂದೊಳ್ಳೆ ಬೇಸ್ ನೀಡುತ್ತದೆ.
ಪೌಡರ್ ಆಧಾರಿತ ಉತ್ಪನ್ನಗಳು ಬೆಸ್ಟ್:
ಮಳೆಗಾಲದಲ್ಲಿ ಕ್ರೀಮ್ ಆಧಾರಿತ ಉತ್ಪನ್ನಗಳು ಕಿರಿಕಿರಿ ಉಂಟು ಮಾಡಬಹುದು. ಅಂದ್ರೆ ಕ್ರೀಮ್ ಆಧಾರಿತ ಉತ್ಪನ್ನಗಳು ನೀರಿನಲ್ಲಿ ಕರಗಿ, ಅವ್ಯವಸ್ಥೆ ಉಂಟು ಮಾಡುತ್ತವೆ. ಆದ್ದರಿಂದ ಮಳೆಗಾಲದಲ್ಲಿ ನಿಮ್ಮ ಮೇಕಪ್ ಉತ್ಪನ್ನಗಳನ್ನು ಕ್ರೀಮ್ನಿಂದ ಪೌಡರ್ಗೆ ಬದಲಾಯಿಸಿಕೊಳ್ಳಿ. ಇದು ನಿಮಗೆ ತೇವಾಂಶನ್ನು ಹೀರಿಕೊಳ್ಳಲು ಹಾಗೂ ಸಂಪೂರ್ಣ ಫಿನಿಶಿಂಗ್ ಲುಕ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ಮಡ್ಜಿಂಗ್ ಮತ್ತು ಕರಗುವುದನ್ನು ತಪ್ಪಿಸಲು ಪೌಡರ್ ಆಧಾರಿತ ಬ್ಲಶ್ ಮತ್ತು ಐಶ್ಯಾಡೋದೊಂದಿಗೆ ನಿಮ್ಮ ಕಣ್ಣಿನ ಮೇಕ್ಅಪ್ ಅನ್ನು ಮುಗಿಸಿ.
ಹೊಳಪಿನ ತುಟಿಗಳಿಗೆ ಮ್ಯಾಟ್ ಲಿಪ್ಸ್ಟಿಕ್ಗಳು:
ಮಳೆಗಾಲದ ವಾತಾವರಣದಲ್ಲಿ ಲಿಪ್ ಗ್ಲೋಸ್ಗಳು ಮತ್ತು ಕ್ರೀಮ್ ಲಿಪ್ಸ್ಟಿಕ್ಗಳು ಬೇಗನೇ ಮರೆಯಾಗುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಟ್ರಾನ್ಸಫರ್ ಪ್ರೂಪ್ ಮ್ಯಾಟ್ ಲಿಪ್ಸ್ಟಿಕ್ಗಳನ್ನು ಆರಿಸಿಕೊಳ್ಳಿ. ನಿಮ್ಮ ಲಿಪ್ಸ್ಟಿಕ್ ಸರಿಯಾಗಿ ಸೆಟ್ ಆಗಲು, ಹಚ್ಚುವ ಮೊದಲು ಲಿಪ್ ಬಾಮ್ ಅಥವಾ ಮಾಯಿಶ್ಚರೈಸರ್ ಅನ್ವಯಿಸಿ.
ಕೇಕಿ ಕನ್ಸೀಲರ್ಗಳು ಬೇಡ:
ಮುಖದಲ್ಲಿನ ಕಪ್ಪು ಕಲೆಗಳನ್ನು ಮರೆಮಾಚಲು ಕನ್ಸೀಲರ್ಗಳು ಅಗತ್ಯ. ಆದರೆ ಕೇಕಿ ಅಂದರೆ ಹೆಚ್ಚು ಕ್ರೀಮಿಯಾಗಿರುವ ಕನ್ಸೀಲರ್ಗಳು ಮಳೆಗಾಲಕ್ಕೆ ಉತ್ತಮವಲ್ಲ. ಇವು ನಿಮ್ಮ ಮೇಕಪನ್ನು ಇನ್ನಷ್ಟು ದಪ್ಪವಾಗಿ ಕಾಣುವಂತೆ ಮಾಡುತ್ತವೆ. ಮಲೆಗಾಲದಲ್ಲಿ ಮೇಕಪ್ ಆದಷ್ಟು ಸಿಂಪಲ್ ಆಗಿದ್ದರೆ ಚೆನ್ನ. ಇದನ್ನು ತಡೆಗಟ್ಟಲು, ಮ್ಯಾಟ್ ಅಥವಾ ಪೌಡರ್ ಆಧಾರಿತ ಕನ್ಸೀಲರ್ ಆಯ್ಕೆ ಮಾಡುವುದು ಉತ್ತಮ. ಆಯಿಲ್ ಫ್ರೀ ಕನ್ಸೀಲರ್ ಬಳಸುವುದರಿಂದ ನಿಮ್ಮ ಮುಖವು ಕಡಿಮೆ ಎಣ್ಣೆಯುಕ್ತವಾಗಿ ಕಾಣುವಂತೆ ಮಾಡುತ್ತದೆ.
ವಾಟರ್ಪ್ರೂಪ್ ಮಸ್ಕರಾ ಮತ್ತು ಐಲೈನರ್ ಅತ್ಯಗತ್ಯ:
ಮಳೆಗಾಲಕ್ಕೆ ಇವೆರಡು ಅತ್ಯಗತ್ಯ. ವಾಡರ್ಫ್ರೂಪ್ ಮಸ್ಕರಾ ಹಾಗೂ ಐಲೈನರ್ ನಿಮ್ಮ ಕಣ್ಣು ಹಾಗೂ ರೆಪ್ಪೆಗೂದಲುಗಳು ಸ್ಮಡ್ಜ್ ಆಗದೇ ಇರುವಂತೆ ಕಾಪಾಡಿ, ಸುಂದರವಾದ ನೋಟವನ್ನು ನೀಡುತ್ತವೆ. ವಾಟರ್ಪ್ರೂಫ್ ಇಲ್ಲದೇ ಹೋದಲ್ಲಿ ಮಳೆ ನೀರಿಗೆ ಸಿಲುಕಿ ಎಲ್ಲವೂ ಅಸ್ತವ್ಯಸ್ಥವಾಗುವುತ್ತವೆ. ಅಷ್ಟೇ ಅಲ್ಲ, ಕಣ್ಣಿನ ಮೇಕಪ್ಗೆ ತಿಳಿ ಮತ್ತು ನೀಲಿಬಣ್ಣದ ಕಂದುಗಳಂತಹ ಲೈಟ್ ಕಲರ್ಗಳನ್ನು ಆಯ್ಕೆಮಾಡಿ.
ಕೊನೆಯದಾಗಿ ಸೆಟ್ಟಿಂಗ್ ಸ್ಪ್ರೇ:
ಮೇಲಿನ ಎಲ್ಲಾ ಹಂತ ಪೂರ್ಣಗೊಳಿಸಿ ಈ ಹಂತ ಮಾಡದೇ ಇದ್ದರೆ ನಿಮ್ಮ ಶ್ರಮವೆಲ್ಲವೂ ವ್ಯರ್ಥವಾಗೋದ್ರಲ್ಲಿ ಸಂಶಯವಿಲ್ಲ. ಹೌದು, ನೀವು ಮೇಕಪ್ಗೆ ಹಾಕಿದ ಶ್ರಮ ವ್ಯರ್ಥವಾಗಬಾರದೆಂದರೆ, ಕೊನೆಯದಾಗಿ ಸೆಟ್ಟಿಂಗ್ ಸ್ಪ್ರೇ ಬಳಸುವುದನ್ನು ಮರೆಯದಿರಿ. ಇದು ನಿಮ್ಮ ಮೇಕಪನ್ನು ಸೆಟ್ ಮಾಡಿ, ಒಂದು ಕಂಪ್ಲೀಟ್ ಲುಕ್ ನೀಡುವುದು. ಸೆಟ್ಟಿಂಗ್ ಸ್ಪ್ರೇ ಅನ್ನು ನಿಮ್ಮ ಮುಖದಿಂದ ದೂರದಲ್ಲಿ ಹಿಡಿದುಕೊಂಡು, ಕೆಳಮುಖ ಚಲನೆಯಲ್ಲಿ, ಪ್ರತಿ ಬದಿಗೆ ಮತ್ತು ಮಧ್ಯಕ್ಕೆ ಮೂರು ಬಾರಿ ಸಿಂಪಡಿಸಿ.