ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಶ್ವಯೋಗದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಶಿಕ್ಷಕ ಮಧುಸೂದನ ಎಂ. ದೀಪ ಬೆಳಗಿಸಿ ಉದ್ಘಾಟಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಪೂಜಾಶ್ರೀ `ಯೋಗದ ಮಹತ್ವ' ಕುರಿತು ವಿವರಣೆ ನೀಡಿದರು. ಮಕ್ಕಳಿಂದ ವಿವಿಧ ಯೋಗ ಪ್ರದರ್ಶನಗೊಂಡಿತು. ಆಯ್ದ ಮಕ್ಕಳು ಸೂರ್ಯ ನಮಸ್ಕಾರದ ಎಲ್ಲಾ ಭಂಗಿಗಳನ್ನು ಆಕರ್ಷಣೀಯವಾಗಿ ಪ್ರದರ್ಶಿಸಿದರು. ಪ್ರತೀ ಆಸನದ ಮಹತ್ವವನ್ನು ವಿವರಿಸಲಾಯಿತು. ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳು ಸರಳ ಆಸನಗಳಾದ ವಜ್ರಾಸನ, ಊಧ್ರ್ವ ವಜ್ರಾಸನ, ತಾಡಾಸನ, ಅರ್ಧಕಟಿ ಚಕ್ರಾಸನ, ಹಿರಿಯ ಪ್ರಾಥಮಿಕ ವಿಭಾಗ ಮತ್ತು ಹೈಸ್ಕೂಲು ವಿದ್ಯಾರ್ಥಿಗಳು ಸೂರ್ಯನಮಸ್ಕಾರ, ಕೆಲವು ಆಸನಗಳನ್ನು ಪ್ರದರ್ಶಿಸಿದರು. ಪ್ರಾಣಾಯಾಮದೊಂದಿಗೆ ಹೈಸ್ಕೂಲು ಮಕ್ಕಳ ಕಾರ್ಯಕ್ರಮ ಸಂಪನ್ನಗೊಂಡಿತು.
ರಕ್ಷಕ ಶಿಕ್ಷ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ ಶುಭಾಶಂಸನೆಗೈದರು. ಶಾಲಾ ಪ್ರಬಂಧಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. 6ನೇ ತರಗತಿಯ ವಿದ್ಯಾರ್ಥಿನಿ, ಯೋಗ ಚಾಂಪಿಯನ್ ಸನ್ನಿಧಿ ಪಳ್ಳತ್ತಡ್ಕ ಯೋಗ ಪ್ರದರ್ಶನ ನೀಡಿದಳು. ವಿದ್ಯಾರ್ಥಿಗಳಾದ ಪ್ರದ್ಯೂಷ್ ಕೆದಿಲಾಯ ಸ್ವಾಗತಿಸಿ, ಪ್ರಥಮಕೃಷ್ಣ ಚಡಗ ವಂದಿಸಿದರು. ವಿದ್ಯಾರ್ಥಿನಿಯರಾದ ಕೃತ್ತಿಕಾ ಮತ್ತು ಸ್ತುತಿ ಕುಳೂರು ನಿರೂಪಿಸಿದರು.