ಬದಿಯಡ್ಕ:ಧೂಮಪಾನ, ಮದ್ಯಪಾನ, ಅಮಲು ವಸ್ತುಗಳ ಸೇವನೆಯು ಸಾಮಾಜಿಕ ಪಿಡುಗು ಆಗಿದ್ದು ಬಾಲ್ಯ ಕಾಲದಲ್ಲಿಯೇ ಅವುಗಳ ವಿರುದ್ಧ ಪ್ರತಿಜ್ಞೆ ಮಾಡಬೇಕು ಎಂದು ಪ್ರಭಾರ ಮುಖ್ಯ ಶಿಕ್ಷಕಿ ಬೀನಾ ನುಡಿದರು.
ವಿಶ್ವ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು.
ಆರೋಗ್ಯ ಹಾಗೂ ಆರ್ಥಿಕ ನಷ್ಟಕ್ಕೆಕಾರಣವಾಗುವ ದುಶ್ಚಟಗಳ ಬದಲು ಉತ್ತಮ ಹವ್ಯಾಸ ಬೆಳೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕ ಜಯಕೃಷ್ಣನ್ ಉಣ್ಣಿ ಅವರು ದಿನಾಚರಣೆಯ ಔಚಿತ್ಯ ವಿವರಿಸಿದರು.ಗೋಪಾಲಕೃಷ್ಣ ಭಟ್ ವಂದಿಸಿದರು.ಭಾಷಣ,ಪೋಸ್ಟರ್ ರಚನೆ, ಅಮಲು ವಸ್ತು ವಿರೋಧಿ ಸಹಿ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಶಾಲಾವರಣ ಮುಂತಾದ ಕಾರ್ಯಕ್ರಮ ಏರ್ಪಡಿಸಲಾಯಿತು.