ಕುಂಬಳೆ: ಸ್ವಾತಂತ್ರ್ಯ ಹೋರಾಟಗಾರ, ವೀರ ಸಾವರ್ಕರ್ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮೂಲಕ ಪರಚಾರ ನಡೆಸಿರುವ ಕುಂಬಳೆ ಗ್ರಾಮ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ವಿರುದ್ಧ ಬಿಜೆಪಿ ಕುಂಬಳೆ ಪಂಚಾಯಿತಿ ಸಮಿತಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದೆ.
ಈ ವ್ಯಕ್ತಿ ತಾನೊಬ್ಬ ಸರ್ಕಾರಿ ನೌಕರನೆಂಬ ಅರಿವೂ ಇಲ್ಲದೆ ಸ್ವಾತಂತ್ರ್ಯ ಯೋಧರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕುವ ಮೂಲಕ ಜನರ ಮಧ್ಯೆ ಗುಂಪು ಘರ್ಷಣೆ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜನ್ಮ ದಿನವನ್ನು ಮೇ 28ರಂದು ದೇಶಾದ್ಯಂತ ಆಚರಿಸುವ ಮಧ್ಯೆ, ಕುಂಬಳೆ ಗ್ರಪಂ ಸಹಾಯಕ ಕಾರ್ಯದರ್ಶಿ ವಾಟ್ಸಪ್‍ನಲ್ಲಿಅವಹೇಳನಕಾರಿ ಕಾರ್ಟೂನ್ ಪೋಸ್ಟ್ ಮಾಡಿ ದೇಶಭಕ್ತರಲ್ಲಿ ನೋವುಂಟುಮಾಡಲು ಯತ್ನಿಸಿದ್ದಾರೆ. ಈ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.