ತಿರುವನಂತಪುರಂ; ಕೇರಳದಲ್ಲಿ ಹಾಲು ಪೂರೈಕೆಯನ್ನು ಸಕ್ರಿಯಗೊಳಿಸುವ ನಂದಿನಿ ಘೋಷಣೆಗೆ ಪ್ರತಿಯಾಗಿ ಮಿಲ್ಮಾ ಚೆಕ್ ಮುಂದಿರಿಸಿದೆ.
ಮಿಲ್ಮಾ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ. ಆದರೆ ಮಳಿಗೆಗಳ ಮೂಲಕ ಹಾಲು ಮಾರಾಟ ಮಾಡಲಾಗುವುದಿಲ್ಲ. ಬದಲಿಗೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ.ಮೊದಲು ಬೆಂಗಳೂರು, ಮೈಸೂರು ಮತ್ತು ಮಡಿಕೇರಿಯಲ್ಲಿ ಮಳಿಗೆಗಳನ್ನು ತೆರೆಯಲಾಗುವುದು. ಮತ್ತು ಮಿಲ್ಮಾ ತಮಿಳುನಾಡಿನ ತಂಜಾವೂರು ಮತ್ತು ಮಧುರೈ ತಲುಪಲಿದೆ.
ಇದೇ ವೇಳೆ ಇದನ್ನು ನಂದಿನಿಗೆ ಎದುರಾಗಿ ಪ್ರತಿಕ್ರಿಯೆಯಾಗಿ ನೋಡಬಾರದು ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಹೇಳಿರುವರು. ಭಾರತದ ಎರಡನೇ ಅತಿದೊಡ್ಡ ಹಾಲು ಆಧಾರಿತ ಉತ್ಪನ್ನ ಬ್ರಾಂಡ್ 'ನಂದಿನಿ' ಕೇರಳದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ನಿರ್ಧರಿಸಿದೆ.
ಮಿಲ್ಮಾ ಎರ್ನಾಕುಳಂ ಪ್ರಾದೇಶಿಕ ಒಕ್ಕೂಟದ ಅಧ್ಯಕ್ಷ ಎಂ.ಟಿ.ಜಯನ್ ಮಾತನಾಡಿ, ‘ಕರ್ನಾಟಕ ಹಾಲು ಒಕ್ಕೂಟವು ತನ್ನ ಅನಾರೋಗ್ಯಕರ ಪ್ರವೃತ್ತಿಯನ್ನು ಮುಂದುವರಿಸಿದರೆ, ಕೇರಳದ ರೈತರಿಂದ ಹಾಲು ಖರೀದಿಸುವುದನ್ನು ಬಿಟ್ಟು, ಕರ್ನಾಟಕದ ರೈತರಿಂದ ನೇರವಾಗಿ ಹಾಲು ಖರೀದಿಸುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂದಿರುವರು.