ಮಂಜೇಶ್ವರ: ಮಂಜೇಶ್ವರದಲ್ಲಿ ಮುಂಜಾನೆಯಿಂದಲೇ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಂಜೇಶ್ವರದ ವಿವಿಧ ಮಸೀದಿ ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ಆಲಿಸುವುದು, ಈದ್ ಸಂದೇಶ ಕೇಳುವುದು, ಪರಸ್ಪರ ಅಪ್ಪಿಕೊಳ್ಳುವುದು, ನೆರೆಹೊರೆಯವರು, ಬಂಧುಗಳ ಮನೆಗಳಿಗೆ ಭೇಟಿ ನೀಡುವ ದೃಶ್ಯಗಳು ಕಂಡುಬಂದವು.
ಕುಂಜತ್ತೂರಿನ ತೂಮಿನಾಡು ಮಸ್ಜಿದುನ್ನೂರಿನಲ್ಲಿ ನಡೆದ ಈದ್ ನಮಾಝ್ ಗೆ ಅಶ್ಪಾಕ್ ಅಲ್ ಹಿಕಾಮಿ ನೇತೃತ್ವ ನೀಡಿದರು. ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿ, ಶಫಾ ಮಸೀದಿ, ಕುಂಜತ್ತೂರು ಜುಮಾ ಮಸೀದಿ, ಅಲ್ ಫತಾಹ್ ಜುಮಾ ಮಸೀದಿ ತೂಮಿನಾಡು, ಉದ್ಯಾವರ ಸಾವಿರ ಜಮಾಅತ್, ಪಾಂಡ್ಯಾಲ್ ಜುಮಾ ಮಸೀದಿ ಜುಮಾ ಮಸೀದಿ ಸೇರಿದಂತೆ ಮಂಜೇಶ್ವರ, ಉಪ್ಪಳ, ಕುಂಬಳೆ, ಬದಿಯಡ್ಕ ವಿವಿಧ ಮಸೀದಿಗಳಲ್ಲಿ ಖೇಶ್ವರುತ್ಬಾ ಹಾಗೂ ನಮಾಝ್ ನೆರವೇರಿತು.
ಮಕ್ಕಳು, ಹಿರಿಯರು ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯಗಳನ್ನು ಹಚ್ಚಿ, ವಿವಿಧ ಬಗೆಯ ಖಾದ್ಯಗಳನ್ನು ತಿಂದು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.