ಕಾಸರಗೋಡು: ಉದುಮ ಎರೋಳ್ ಅಂಬಲತಿಂಕಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂ. 18ರಿಂದ 20ರವರೆಗೆ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಅರವತ್ ಕೆ.ಯು.ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂ. 18ರಂದು ಬೆಳಗ್ಗೆ 10.15ಕ್ಕೆ ಎರೋಲ್ ವಡಕ್ಕೇವೀಡು ತರವಾಡಿನಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಹೊರಡಲಿದ್ದು, ವಿವಿಧ ಪ್ರದೇಶಗಳಿಂದ ಹಸಿರುವಾಣಿ ಸಂಗ್ರಹಿಸಿ ದೇವಸ್ಥಾನ ತಲುಪಲಿದೆ. ಮಧ್ಯಾಹ್ನ 12ಕ್ಕೆ ಕೊಪ್ಪಳ ಚಂದ್ರಶೇಖರನ್ ಅವರಿಂದ ಆಧ್ಯಾತ್ಮಿಕ ಉಪನ್ಯಾಸ, ಸಂಜೆ 6ಕ್ಕೆ ತಂತ್ರಿವರ್ಯದರಿಗೆ ಸ್ವಾಗತ, ನಂತರ ದೇವಾಲಯದ ಸಭಾಂಗಣ ಮತ್ತು ಯುಎಇ ಸಮಿತಿ ನಿರ್ಮಿಸಿದ ಮುಂಭಾಗದ ಪಡಿಪ್ಪುರೆ ಸಮರ್ಪಣೆ, 7.30ಕ್ಕೆಕ್ಕೆ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಶಾಸಕ ಸಿ.ಎಚ್.ಕುಂಜಂಬು ಉದ್ಘಾಟಿಸುವರು. ಸ್ವಾಮಿ ವಿವಿಕ್ತಾನಂದ ಸರಸ್ವತಿ ಉಪನ್ಯಾಸ ನೀಡುವರು. ಆಚರಣಾ ಸಮಿತಿ ಅಧ್ಯಕ್ಷ ಪಿ.ಭಾಸ್ಕರನ್ ನಾಯರ್ ಅಧ್ಯಕ್ಷ ತೆ ವಹಿಸುವರು.
20ರಂದು ಬೆಳಗೆಗ 2.30ರಿಂದ ವಿವಿಧ ತಾಂತ್ರಿಕ ವಿಧಿವಿಧಾನಗಳು. 3.49 ರಿಂದ 4.32 ರವರೆಗೆ ದೇವಪ್ರತಿಷ್ಠೆ, ವಿವಿಧ ಕಲಶಾಭಿಷೇಕ ಮತ್ತು ಪೂಜೆ ನಡೆಯುವುದು ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ-ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ಪಿ. ಭಾಸ್ಕರನ್ ನಾಯರ್, ಎ.ದಾಮೋದರನ್ ನಾಯರ್ ತೆಕೇಕರ, ವಿ.ನಾರಾಯಣನ್, ಎ. ಗಂಗಾಧರನ್ ನಾಯರ್, ಖಜಾಂಜಿ ಇ.ವಿ. ವೆಲುಂಗನ್, ಬಿ. ನಾರಾಯಣನ್, ವೈ. ಕೃಷ್ಣ ದಾಸ್, ಶಶಿಧರನ್ ನಾಗತಿಂಕಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.