ಎರ್ನಾಕುಳಂ: ರಾಜ್ಯದಲ್ಲಿ ನಾಳೆ ಮತ್ತು ಗುರುವಾರ ಚಿತ್ರಮಂದಿರಗಳು ಮುಚ್ಚಲ್ಪಡುತ್ತವೆ. ಥಿಯೇಟರ್ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಥಿಯೆಟರ್ ಸಂಘಟನೆ ಎಫ್ ಐಒಸಿ ಘೋಷಿಸಿದೆ.
ಹೊಸ ಚಿತ್ರಗಳಾದ '2018, ಪಚುವುಂ ಮಿಹವಲ ವಲಕಂ' ಒಟಿಟಿ ಬಿಡುಗಡೆಯನ್ನು ವಿರೋಧಿಸಿ ಟೋಕನ್ ಸ್ಟ್ರೈಕ್ ನಡೆಸಲಾಗುತ್ತಿದೆ. ಕೊಚ್ಚಿಯಲ್ಲಿ ಥಿಯೇಟರ್ ಮಾಲೀಕರು ನಡೆಸಿದ ಜಂಟಿ ಸಾಂಸ್ಥಿಕ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಥಿಯೇಟರ್ ಮಾಲೀಕರು ಮತ್ತು ನಿರ್ಮಾಪಕರ ನಡುವಿನ ತಿಳುವಳಿಕೆಯಂತೆ ಚಿತ್ರವು ಥಿಯೇಟರ್ ಬಿಡುಗಡೆಯಾದ 42 ದಿನಗಳ ನಂತರವೇ ಒಟಿಟಿಯÀಲ್ಲಿ ಬಿಡುಗಡೆ ಮಾಡಬಹುದು. ಆದರೆ ಈ ತೀರ್ಮಾನವನ್ನು ಮೀರಿ ಈ ಚಿತ್ರಗಳನ್ನು ಒಟಿಟಿ ಬಿಡುಗಡೆ ಮಾಡಲಾಗಿದೆ ಎಂದು ಫಿಯೋಕ್ ಹೇಳಿದೆ. ನಿರ್ಮಾಪಕರಾಗಿರುವ ನಟರು ಥಿಯೆಟರ್ ಉದ್ಯಮವನ್ನು ನಾಶ ಮಾಡಿದ್ದಾರೆ ಎಂದು ಥಿಯೆಟರ್ ಮಾಕರ ಸಂಘಟನೆ ಆರೋಪಿಸಿದೆ.