ಕಾಸರಗೋಡು: ಮದ್ಯ ಲಭಿಸದಿರುವುದರಿಂದ ಮೊಬೈಲ್ ಟವರ್ ಏರಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಯುವಕನನ್ನು, ಕೊನೆಗೂ ಮದ್ಯ ಪೂರೈಸುವ ಭರವಸೆಯೊಂದಿಗೆ ನೆರೆದವರು ಮನವೊಲಿಸಿ ಟವರ್‍ನಿಂದ ಕೆಳಗಿಳಿಸಿದ್ದಾರೆ. ತಿರುವನಂತಪುರ ನಿವಾಸಿ ಸಜಿನ್ ಅಲಿಯಾಸ್ ಉಣ್ಣಿ(34)ಟವರ್ ಏರಿ ಬೆದರಿಕೆಯೊಡ್ಡಿದ ಯುವಕ.
ಕಾಸರಗೋಡಿನ ಐ.ಸಿ ಭಂಡಾರಿ ರಸ್ತೆ ಸನಿಹ ಸರ್ಕಾರಿ ಮದ್ಯಮಾರಾಟ ಕೇಂದ್ರಕ್ಕೆ ಮದ್ಯಕ್ಕಾಗಿ ಗುರುವಾರ ಸಂಜೆ ಆಗಮಿಸಿದ್ದನು. ಈತನಿಗೆ ಮದ್ಯ ಲಭಿಸದಿರುವುದರಿಂದ ರೋಷಗೊಂಡ ಈತ ಸನಿಹದ ಮೊಬೈಲ್ ಟವರ್ ಏರಿದ್ದಾನೆ. ಇದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕಾಗಮಿಸಿದ್ದರು. ಟವರ್ ಮೇಲೇರಿ ಕುಳಿತಿದ್ದ ಈತನನ್ನು ಇಳಿಯುವಂತೆ ಮನವೊಲಿಸಿದರೂ ಪ್ರಯೋಜವಾಗಿರಲಿಲ್ಲ. ಅಲ್ಲಿಂತ ಮತ್ತೆ ಟವರ್‍ನ ತುತ್ತ ತುದಿಗೇರಿದ ಯುವಕ ಜಿಗಿಯುವುದಾಗಿ ಬೆದರಿಕೆಯೊಡ್ಡಿದ್ದಾನೆ. ಟವರಿನ ಅರ್ಧದ ವರೆಗೆ ಏರಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಕೆಳಗಿಳಿಯಬೇಕಗಿ ಬಂದಿತ್ತು. ನಂತರ ಕೆಳಗಿಂದ ಯಾರೋ ಒಬ್ಬರು ಕೆಳಗಿಳಿದರೆ ಮದ್ಯ ಪೂರೈಸುವುದಾಗಿ ನೀಡಿದ ಭರವಸೆಯನ್ವಯ ಮನಸು ಬದಲಾಯಿಸಿ ಇಳಿಯಲು ಮುಂದಾಗಿದ್ದಾನೆ. ಈ ಮಧ್ಯೆ ಮೊಬೈಲ್ ಟವರಿಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಟವರ್ ಕಂಪೆನಿಯವರು ಆಗಮಿಸಿ ವಿದ್ಯುತ್ ಸಂಪರ್ಕವನ್ನೂ ವಿಚ್ಛೇದಿಸಿದ್ದರು. ಯುವಕನ ದಾಂಧಲೆ ಕಾಣಲು ನೂರರು ಸಂಖ್ಯೆಯಲ್ಲಿ ಜನರು ಟವರ್ ಕೆಳಗೆ ಒಟ್ಟುಸೇರಿದ್ದರು. ರಾತ್ರಿ 8ರ ವಏಳೆಗೆ ಟವರ್‍ನಿಂದ ಇಳಿದ ಯುವಕನನ್ನು ಕಾಸರಗೋಡು ನಗರಠಾಣೆ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಠಾಣೆಗೆ ಕರೆದೊಯ್ದಿದ್ದಾರೆ.
ಕೆಲವು ದಿವಸಗಳ ಹಿಂದೆ ಈತ ಕಾಸರಗೋಡಿಗೆ ಆಗಮಿಸಿದ್ದು, ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಉತ್ತಾಡುತ್ತಿದ್ದು, ರಾತ್ರಿ ವಏಳೆ ಅಂಗಡಿ ವರಾಂಡದಲ್ಲಿ ಮಲಗುತ್ತಿದ್ದನು. ಗುರುವಾರ ಬೆಳಗ್ಗೆ ಕೆಲವರಲ್ಲಿ ಜಗಳವಾಡಿದ್ದು, ಸಂಜೆ ಟವರ್ ಏರಿ ದಾಂಧಲೆ ನಡೆಸಿದ್ದನು. ನಂತರ ಈತನನ್ನು ಪೊಲೀಸರು ರೈಲು ಹತ್ತಿಸಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.