ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳಿರುವ ರಾಹುಲ್ ಗಾಂಧಿ ಅವರನ್ನು ಬಿಷ್ಣುಪುರದಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.
ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳಿರುವ ರಾಹುಲ್ ಗಾಂಧಿ ಅವರನ್ನು ಬಿಷ್ಣುಪುರದಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.
ಇಂಫಾಲಕ್ಕೆ ಬಂದಿಳಿದ ರಾಹುಲ್ ಗಾಂಧಿ, ಚುರಚಂದಪುರದ ಪರಿಹಾರ ಶಿಬಿರಗಳಲ್ಲಿ ಸಂತ್ರಸ್ತರನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದರು. ಇಂಫಾಲದಿಂದ ಸುಮಾರು 20 ಕಿ.ಮೀ.
ಹಿಂಸಾಚಾರದ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಭಾಗವಾಗಿ ರಾಹುಲ್ ಗಾಂಧಿ ಅವರನ್ನು ತಡೆ ಹಿಡಿಯಲಾಗಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರ ಬಿಲ್ಲೆಯ ಉಟ್ಲೌ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಗಿದೆ. ರಾಹುಲ್ ಬೆಂಗಾವಲು ವಾಹನಗಳಿಗೆ ಕಲ್ಲು ಎಸೆಯಲಾಗಿದೆ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವಣ ಹಿಂಸಾಚಾರದಲ್ಲಿ ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.