ತಿರುವನಂತಪುರಂ: ಆಪರೇಷನ್ ಥಿಯೇಟರ್ನಲ್ಲಿ ಹಿಜಾಬ್ ಧರಿಸಬೇಕೆಂಬ ಮುಸ್ಲಿಂ ವಿದ್ಯಾರ್ಥಿಗಳ ಬೇಡಿಕೆಯನ್ನು ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಲಿನೆಟ್ ಮೋರಿಸ್ ತಿರಸ್ಕರಿಸಿದ್ದಾರೆ.
ಆಪರೇಷನ್ ಥಿಯೇಟರ್ ಬಹಳ ಸೂಕ್ಷ್ಮ ಸ್ಥಳವಾಗಿದೆ. ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಮಾತ್ರ ಮುಂದುವರಿಯಲು ಸಾಧ್ಯ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ. ಜೂ.26ರಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ವಿವಿಧ ಬ್ಯಾಚ್ ನ ವಿದ್ಯಾರ್ಥಿಗಳ ಸಹಿ ಇರುವ ಪತ್ರ ನೀಡಲಾಗಿತ್ತು. ಪತ್ರ ಕಳುಹಿಸಿದ ವಿದ್ಯಾರ್ಥಿಗಳಿಗೆ ನಿರ್ಧಾರ ತಿಳಿಸಲಾಗಿದ್ದರೂ ಶಸ್ತ್ರಚಿಕಿತ್ಸೆ, ಅರಿವಳಿಕೆ ಮತ್ತಿತರ ವಿಭಾಗಗಳ ಮುಖ್ಯಸ್ಥರು, ಸೋಂಕು ನಿಯಂತ್ರಣ ವಿಭಾಗದ ಪ್ರತಿನಿಧಿಗಳ ಸಭೆ ಕರೆದು ಎರಡು ವಾರಗಳಲ್ಲಿ ವಿದ್ಯಾರ್ಥಿಗಳಿಗೆ ಅಧಿಕೃತ ಉತ್ತರ ನೀಡಲಾಗುವುದು.
ಮಹಿಳಾ ವಿದ್ಯಾರ್ಥಿಗಳ ಬೇಡಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಐಎಂಎ ಹೇಳಿದೆ. ಆಪರೇಷನ್ ಥಿಯೇಟರ್ ಒಳಗೆ ತಲೆಗೆ ಸ್ಕಾರ್ಫ್ ಮತ್ತು ಉದ್ದ ತೋಳಿನ ಜಾಕೆಟ್ ಧರಿಸಲು ಅನುಮತಿ ನೀಡುವಂತೆ ವಿದ್ಯಾರ್ಥಿಗಳು ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಆದರೆ ವಿದ್ಯಾರ್ಥಿಗಳ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಲಿನೆಟ್ ಮೋರಿಸ್ ತಿಳಿಸಿದ್ದರು. ಪ್ರಾಂಶುಪಾಲರು ಮಾತನಾಡಿ, ರೋಗಿಯ ಜೀವ ಮುಖ್ಯವಾಗಿದ್ದು, ನಾವು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಮಾತ್ರ ಮುಂದುವರಿಯಲು ಸಾಧ್ಯ ಎಂದಿರುವರು.
ಐಎಂಎ ಕೂಡ ಮಹಿಳಾ ವಿದ್ಯಾರ್ಥಿಗಳ ಬೇಡಿಕೆಯನ್ನು ತಿರಸ್ಕರಿಸಿದ್ದು, ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಹೇಳಿದೆ.