ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ 'ಸ್ಟಾರ್ಸ್ ವರ್ಣಕುಟೀರಂ' ಮಾದರಿ ಪ.ಪೂ.ಶಾಲಾ ಯೋಜನೆಯ ಅಂಗವಾಗಿ ಮಂಜೇಶ್ವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಪ್ರೀಸ್ಕೂಲ್ ನೂತನ ಕಟ್ಟಡವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಗುರುವಾರ ಉದ್ಘಾಟಿಸಿದರು. 10 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಪೂರ್ವ ಶಾಲೆ ನಿರ್ಮಿಸಲಾಗಿದೆ.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಂಶೀನಾ, ಎಸ್ ಎಸ್ ಎ ಡಿಪಿಓ ಡಿ.ನಾರಾಯಣ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹಮ್ಮದ್ ಸಿದ್ದೀಕ್, ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶೆಣೈ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಮಂಜೇಶ್ವರ ಎಇಒ ವಿ.ದಿನೇಶ, ಬಿಪಿಸಿ ಮಂಜೇಶ್ವರ ಬಿಆರ್‍ಸಿ ಪಿ.ವಿಜಯ ಕುಮಾರ್, ಮಂಜೇಶ್ವರ ಸಿಐ ಸಂತೋಷ್ ಕುಮಾರ್, ಮಂಜೇಶ್ವರ ಗ್ರಾ.ಪಂ ಸದಸ್ಯ ರಾಜೇಶ್, ಬಿ.ಆರ್.ಸಿ. ಮಂಜೇಶ್ವರ ತರಬೇತುದಾರ ಜಾಯ್, ನಿವೃತ್ತ ಶಿಕ್ಷಕರಾದ ಎಂ.ಜಯಂತ, ಸೀನಾ ಮರಿಯಂ, ಶಿಕ್ಷಣ ತಜ್ಞ ಯು.ಪುರುμÉೂೀತ್ತಮ ದಾಸ್ ಮತ್ತಿತರರು ಉಪಸ್ಥಿತರಿದ್ದರು. ಜಿ.ಡಬ್ಲ್ಯೂ.ಎಲ್.ಪಿ.ಎಸ್ ಶಾಲೆಯ ಮುಖ್ಯ ಶಿಕ್ಷಕ ಎ.ಸುಕೇಶ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಸೋನಿಯಾ ಜ್ಯೋತಿ ವಂದಿಸಿದರು.