ಕಾಸರಗೋಡು: ಮುಳಿಯಾರ್ ಕೆಟ್ಟುಂಗಲ್‍ನ ಮನೆಯೊಂದರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ಗೆ ವಹಿಸಿಕೊಡುವಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಆಗ್ರಹಿಸಿದ್ದಾರೆ. ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ಯಾವ ಉದ್ದೇಶಕ್ಕಾಗಿ ತಮದಿರಿಸಲಾಗಿದೆ ಹಾಗೂ ಇದರ ಹಿಮದಿನ ರಹಸ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಇತ್ತೀಚೆಗೆ ಕೇರಳದ ಇನ್ನೊಂದು ಸ್ಥಳದಿಮದಲೂ ಸ್ಫೋಟಕ ವಶಪಡಿಸಿಕೊಳ್ಳಲಾಗಿದ್ದು, ಈ ಘಟನೆಗಳು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿವೆ ಎಂದು ಶಂಕಿಸಲಾಗಿದೆ. ಎನ್‍ಐಎ ತನಿಖೆಯಿಮದ ಮಾತ್ರ ನಿಜ ಸಂಗತಿ ಬಯಲಿಗೆಳೆಯಲು ಸಾಧ್ಯ. ಈ ಬಗ್ಗೆ ರಾಜ್ಯ ಸರ್ಕಾರವೂ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ರವೀಶ ತಂತ್ರಿ ತಿಳಿಸಿದ್ದಾರೆ.