ಇಂಫಾಲ: ಮಣಿಪುರದ ಸಿರೌ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಶಂಕಿತ ಕೂಕಿ ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಹುತಾತ್ಮರಾಗಿದ್ದು, ಅಸ್ಸಾಂ ರೈಫಲ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಇಂಫಾಲ: ಮಣಿಪುರದ ಸಿರೌ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಶಂಕಿತ ಕೂಕಿ ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಹುತಾತ್ಮರಾಗಿದ್ದು, ಅಸ್ಸಾಂ ರೈಫಲ್‌ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಕಾಕ್‌ಜಿಂಗ್ ಜಿಲ್ಲೆಯ ಸುಗನು ಪ್ರದೇಶದ ಸಿರೌನ ಶಾಲೆಯಲ್ಲಿ ಬಿಎಸ್‌ಎಫ್ ಯೋಧರು ಮತ್ತು ಶಂಕಿತ ಬಂಡುಕೋರರು ನಡುವೆ ಗುಂಡಿನ ಕಾಳಗ ನಡೆದಿದೆ.
'ಪ್ರೌಢಶಾಲೆಗೆ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಯೋಧರ ಮೇಲೆ ನಸುಕಿನ 4.15ರ ಸಮಾರಿಗೆ ಬಂಡುಕೋರರು ಏಕಾಏಕಿ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ' ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಯೋಧ ರಂಜಿತ್ ಯಾದವ್ ಅವರನ್ನು ಕಾಕ್‌ಚಿಂಗ್‌ನ ಜೀವನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಯಗೊಂಡಿರುವ ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರನ್ನು ಏರ್ ಆಂಬುಲೆನ್ಸ್ ಮೂಲಕ ಮಂತ್ರಿಪುಖ್ರಿಗೆ ಸಾಗಿಸಲಾಗಿದೆ. ಬಂಡುಕೋರರಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.