ಕುಂಬಳೆ: ಹದಿಹರೆಯದವರ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ವೆಲ್ ನೆಸ್ ಡೇ ಪೀರ್ ಎಜುಕೇಶನ್ ಮೀಟ್ 'ಪ್ರತಿಕ್ಷಾ'ವನ್ನು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕುಂಬಳೆ, ಪುತ್ತಿಗೆ ಮತ್ತು ಮಧೂರು ಗ್ರಾಮ ಪಂಚಾಯತಿ ಪೀರ್ ಎಜುಕೇಶನ್ ಆಗಿ ಆಯ್ಕೆಯಾದ ಸುಮಾರು 80 ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸಭೆಯನ್ನು ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಮಾನಸಿಕ ಆರೋಗ್ಯ, ಪೋಷಣೆ, ಸಾಮಾಜಿಕ ಮಾಧ್ಯಮಗಳ ಅಪಾಯ, ಜೀವನಶೈಲಿ ರೋಗಗಳು, ಹದಿಹರೆಯದವರ ಸಮಸ್ಯೆ ಪರಿಹಾರ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಕುರಿತು ತರಗತಿಗಳನ್ನು ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ ವಿತರಿಸಲಾಯಿತು. ಪಿಎಚ್‍ಎನ್ ಮೇಲ್ವಿಚಾರಕಿ ಶೋಭನಾ, ಪಿಆರ್‍ಒ ಟಿ.ವಿ.ಕೀರ್ತಿ, ಎಸ್‍ಕೆ ಆರ್‍ಬಿ ಶುಶ್ರೂಷಕಿಯರಾದ ಆರ್.ಎಸ್.ರೇಖ್, ಶಿಜಾ ಪಿ ಜಾರ್ಜ್, ಕಾವ್ಯಪ್ರಕಾಶ್, ರುಗ್ಮಾವತಿ, ಭಾಗೀರಥಿ, ಅವಿತಾ ಅರವಿಂದನ್ ಮಾತನಾಡಿದರು.